Job Description: * ದಿಗ್ಗಜ ಬಾಕ್ಸರ್ ಮೇರಿ ಕೋಮ್‌ ಮತ್ತು ಬಾಲಿವುಡ್‌ ನಟ ಫರ್ಹಾನ್ ಅಖ್ತರ್ ಅವರನ್ನು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.* ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಮಹಿಳಾ ವಿಶ್ವ ಚಾಂಪಿಯನ್‌ಶಿಪ್ 2023 ರ ಶೀರ್ಷಿಕೆ ಪ್ರಾಯೋಜಕರನ್ನು ಮಾರ್ಚ್ 12 ರಂದು ಅನಾವರಣಗೊಳಿದ್ದು, ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರನ್ನು ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಿದೆ.* ಮಾರ್ಚ್ 15 ರಿಂದ 26 ರವರೆಗೆ ನವದೆಹಲಿಯ ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಚಾಂಪಿಯನ್ ಷಿಪ್ ಆಯೋಜನೆಗೊಂಡಿದೆ.* ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷರಾದ ಅಜಯ್ ಸಿಂಘಾನಿಯಾ ರವರು "ಮಹಿಂದ್ರಾ ಯಾಂಡ್ ಮಹಿಂದ್ರಾ ಕಂಪನಿಯು ಚಾಂಪಿಯನ್ ಷಿಪ್ ನ ಟೈಟಲ್ ಪ್ರಾಯೋಜಕತ್ವ ವಹಿಸಿಕೊಂಡಿದೆ" ಎಂದು ಹೇಳಿದ್ದಾರೆ. * ಚಾಂಪಿಯನ್ ಷಿಪ್ ನಲ್ಲಿ ಒಟ್ಟು 74 ದೇಶಗಳ 350 ಕ್ಕೂ ಹೆಚ್ಚು ಬಕ್ಸರ್ ಗಳು ಚಾಂಪಿಯನ್ ಷಿಪ್ ಗೆ ನೋಂದಾಯಿಸಿಕೊಂಡಿದ್ದಾರೆ.