Job Description: * ಮಾರ್ಚ್ 12 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿನ ಮೊದಲ ಮೆಥೆನಾಲ್ ಬಸ್‌ಗಳನ್ನು ಅನಾವರಣಗೊಳಿಸಲಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ವಿ.ಸೂರ್ಯ ಸೇನ ತಿಳಿಸಿದ್ದಾರೆ.* ನೀತಿ ಆಯೋಗ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಅಶೋಕ್ ಲೇಲ್ಯಾಂಡ್ ಜೊತೆಗೆ ಬಿಎಂಟಿಸಿ ಈ ಯೋಜನೆಯನ್ನು ನಡೆಸುತ್ತಿದ್ದು, ಬಸ್‌ಗಳು ಹೊರ ಉಗುಳುವ ಮಾಲಿನ್ಯ ಮಟ್ಟದಲ್ಲಿ ಗಣನೀಯ ಇಳಿಕೆಗೆ ಈ ಬಸ್‌ಗಳು ಕಾರಣವಾಗಿವೆ.