Job Description: * ರಾಮಚಂದ್ರ ಪೌಡೆಲ್ ಅವರು ನೇಪಾಳದ ನೂತನ ಅಧ್ಯಕ್ಷರಾಗಿ ಮಾರ್ಚ್ 13 ಸೋಮವಾರ ದಿನದಂದು ಪ್ರಮಾಣವಚನ ಸ್ವೀಕಾರ ಮಾಡಿದರು.* ರಾಷ್ಟ್ರಪತಿ ಭವನ 'ಶೀತಲ್ ನಿವಾಸ'ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ನ್ಯಾಯಮೂರ್ತಿ ಹರಿಕೃಷ್ಣ ಕರ್ಕಿ ಅವರು ಪೌಡೆಲ್ ರವರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ಪುಷ್ಪ ಕಮಲ್ ದಹಲ್, ಸ್ಪೀಕರ್ ದೇವ್ ರಾಜ್ ಫಿಮಿರೆ, ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷ ಗಣೇಶ್ ಪ್ರಸಾದ್ ತಿಮಿಲ್ಲಿನ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.