* ನಯೋದ್ಯಮಿಗಳಿಗೆ ಉತ್ತೇಜನ ನೀಡಿ ಪೂರಕ ವಾತಾವರಣ ಕಲ್ಪಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಸತತ ಎರಡನೇ ಭಾರಿಗೆ ಅತ್ಯುತ್ತಮ ಸಾಧಕ ರಾಜ್ಯ ಶ್ರೇಯಾಂಕಕ್ಕೆ ಭಾಜನವಾಗಿದೆ.* ಗುಜರಾತ್, ಕೇರಳ, ತಮಿಳುನಾಡು ಹಾಗೂ ಹಿಮಾಚಲ ಪ್ರದೇಶ ಕೂಡ ನವೋದ್ಯಮ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಈ ವಿಭಾಗದಲ್ಲಿ ಗುಜರಾತ್ ಸತತ ನಾಲ್ಕನೇ ಬಾರಿ ಸ್ಥಾನ ಪಡೆದಿದೆ.* ಶ್ರೇಯಾಂಕ ನೀಡುವ ಉದ್ದೇಶದಿಂದ 'ಅತ್ಯುತ್ತಮ ಸಾಧಕ ರಾಜ್ಯಗಳು', 'ಉತ್ತಮ ಸಾಧಕ ರಾಜ್ಯಗಳು', 'ಸಾಧಕ ರಾಜ್ಯಗಳು', 'ಸಾಧನೆ ಆಕಾಂಕ್ಷಿ ರಾಜ್ಯಗಳು' ಹಾಗೂ 'ಪ್ರವರ್ಧಮಾನಕ್ಕೆ ಬರುತ್ತಿರುವ ರಾಜ್ಯಗಳು' ಎಂಬ ಶೀರ್ಷಿಕೆಯಡಿ ಐದು ವಿಭಾಗಗಳಾಗಿ ವರ್ಗೀಕರಿಸಲಾಗಿತ್ತು.* ಅಲ್ಲದೇ, ಒಂದು ಕೋಟಿ ಒಳಗಿರುವ ಜನಸಂಖ್ಯೆ ಹಾಗೂ ಅದಕ್ಕಿಂತ ಹೆಚ್ಚಿರುವ ಜನಸಂಖ್ಯೆ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿಂಗಡಿಸಲಾಗಿತ್ತು ಎಂದು ಡಿಪಿಐಐಟಿ ತಿಳಿಸಿದೆ.* 'ಉತ್ತಮ ಸಾಧಕ ರಾಜ್ಯಗಳು' ಪಟ್ಟಿ : ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ 'ಉತ್ತಮ ಸಾಧಕ ರಾಜ್ಯಗಳು' ಪಟ್ಟಿಯಲ್ಲಿವೆ. * ಆಂಧ್ರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ತ್ರಿಪುರ 'ನಾಯಕ' ರಾಜ್ಯಗಳು ಎಂದು ಪರಿಗಣಿತವಾಗಿವೆ.* 'ಸಾಧನೆ ಆಕಾಂಕ್ಷಿ ರಾಜ್ಯಗಳು/ ಪ್ರದೇಶಗಳು' ಪಟ್ಟಿಯ :  ಬಿಹಾರ, ಹರಿಯಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ನಾಗಾಲ್ಯಾಂಡ್ ಇವೆ.* ಛತ್ತೀಸಗಢ, ನವದೆಹಲಿ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ದಾದ್ರಾ ಮತ್ತು ನಗರ್ ಹವೇಲಿ, ದಮನ್‌ ಮತ್ತು ಡಿಯು, ಲಡಾಖ್, ಮಿಜೋರಾಂ, ಪುದುಚೇರಿ ಮತ್ತು ಸಿಕ್ಕಿಂ 'ಪ್ರವರ್ಧ- ಮಾನಕ್ಕೆ ಬರುತ್ತಿರುವ ರಾಜ್ಯಗಳು/ ಪ್ರದೇಶಗಳು' ಪಟ್ಟಿಯಲ್ಲಿವೆ.* ನವೋದ್ಯಮಿಗಳಿಗೆ ಸಾಂಸ್ಥಿಕ ಬೆಂಬಲ, ಆರ್ಥಿಕ ನೆರವು ಸೇರಿದಂತೆ 25 ಅಂಶಗಳ ಪಾಲನೆಯಲ್ಲಿ ರಾಜ್ಯಗಳ ಕ್ರಮಗಳ ಆಧಾರದ ಮೇಲೆ ಪಟ್ಟಿ ಸಿದ್ಧ ಪಡಿಸಲಾಗಿದೆ.