* ದಲಿತರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಇದೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.*  ಶಿಕ್ಷೆ ಪ್ರಮಾಣ ಹೆಚ್ಚಾಗದಿದ್ದರೆ ಡಿಸಿಪಿ/ ಎಸ್ ಪಿಗಳನ್ನೇ ಹೊಣೆ ಮಾಡುವುದು ಅನಿವಾರ್ಯ ಎಂದು ಮುಖ್ಯಮಂತ್ರಿಯವರು ಕಟುವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.* 'ರಾಜ್ಯದಲ್ಲಿ ಕೋಮುಗಲಭೆಗಳು ನಡೆದಿಲ್ಲದಿರುವುದು ಸುವ್ಯವಸ್ಥೆಗೆ ಉತ್ತಮವಾಗಿರುವುದಕ್ಕೆ ನಿದರ್ಶನ ಎಂದು CM ಸಿದ್ದರಾಮ್ಯನವರು ತಿಳಿಸಿದ್ದಾರೆ.* ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಚಾಲನೆ- ಅನುಕಂಪ ಆಧಾರದ ನೇಮಕಾತಿ ಪೋರ್ಟಲ್- ಪೊಲೀಸ್ ಐಟಿ-ವಿ2- ಐಟಿಪಿಎ ಸರಳ್ ಆ್ಯಪ್- ಸಿ.ಜಿ ನೋಂದಣಿ ಪೋರ್ಟಲ್- ಪೊಲೀಸ್ ಮಿತ್ರ ಚಾಟ್‌ಬಾಟ್- ರಾಜ್ಯ ಪೊಲೀಸ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಾಂಶ- ಆರ್ಥಿಕ ಗುಪ್ತಚರ ತಂತ್ರಾಂಶಗಳು ಹಾಗೂ ಸಂಕ್ಷಿಪ್ತ ಸೈಬ‌ರ್ ಅಪರಾಧ ಕೈಪಿಡಿ