* ಚೀನಾದ 'ರೋಡ್‌ ಅ್ಯಂಡ್‌ ಬೆಲ್ಟ್‌' ಯೋಜನೆಗೆ ಪ್ರತಿಯಾಗಿ ರೂಪಿಸಲಾಗಿರುವ ಚಬಹಾರ ಬಂದರು ಅಭಿವೃದ್ಧಿ ಯೋಜನೆಗೆ ಭಾರತ ಮತ್ತು ಇರಾನ್ ದೇಶಗಳು ಜನವರಿ 15 ರಂದು ಸಹಿ ಮಾಡಿವೆ.* ಇರಾನ್‌ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರು ಇರಾನ್‌ನ ರಸ್ತೆ ಹಾಗೂ ನಗರಾಭಿವೃದ್ಧಿ ಸಚಿವ ಮೆಹರ್ದಾದ್‌ ಬಜರ್‌ಪಾಶ್‌ ಅವರ ಮದ್ಯೆ ನಡೆದ ಮಾತುಕತೆಯ ಬಳಿಕ ದ್ವಿಪಕ್ಷೀಯ ಸಹಕಾರ ಒಪ್ಪಂದದಡಿ 'ಚಬಹಾರ ಬಂದರು' ಪ್ರದೇಶದಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆ ಕೈಗೊಳ್ಳಲು ಸಹಿ ಹಾಕಿದರು.* ಉತ್ತರ ದಕ್ಷಿಣ ಕಾರಿಡಾರ್‌ ಯೋಜನೆಯ ಭಾಗವಾಗಿ ಭಾರತ - ಇರಾನ್‌ ಸರಕಾರ ಅಭಿವೃದ್ಧಿಪಡಿಸುತ್ತಿರುವ ಚಬಹಾರ ಬಂದರು ಯೋಜನೆ ಸಮುದ್ರ ಸಂಪರ್ಕ ಯೋಜನೆಯಾಗಿದೆ. * ಚಬಹಾರ ಬಂದರು ಯೋಜನೆ ತುರ್ತು ಸಂದರ್ಭದಲ್ಲಿ ಅಗತ್ಯ ಮಾನವೀಯ ನೆರವಿನ ಕಾರ್ಯ ಕೈಗೊಳ್ಳಲು ರೂಪಿಸಿರುವ ಮಾರ್ಗ ಇದಾಗಿದೆ. ಚೀನಾ ನಿರ್ವಹಿಸುತ್ತಿರುವ ಪಾಕಿಸ್ತಾನದ ಗ್ವಾದರ್‌ ಬಂದರಿನಿಂದ 170 ಕಿ.ಮೀ. ದೂರದಲ್ಲಿದೆ.* ಚಬಹಾರ್ ಎಂದರೆ ಪರ್ಷಿಯನ್ ಭಾಷೆಯಲ್ಲಿ 'ನಾಲ್ಕು ಚಿಲುಮೆಗಳು' ಎಂದರ್ಥ. ಓಮನ್ ಕೊಲ್ಲಿ ಪ್ರದೇಶದಲ್ಲಿ ಬರುವ ಅಗ್ನಿಯ ಇರಾನ್‌ನ ಆಯಕಟ್ಟಿನ ಮಹತ್ವದ ಬಂದರು ಇದಾಗಿದೆ.* ಚಬಹಾರ್ ಬಂದರು ಆಳ ನೀರಿನ ಸೌಲಭ್ಯಗಳನ್ನು ಹೊಂದಿದ್ದು ಬೃಹತ್ ಹಡಗುಗಳ ಚಲನೆ ಮತ್ತು ಲಂಗರು ಹಾಕಲು ಉತ್ತಮ ನೈಸರ್ಗಿಕ ಸೌಕರ್ಯಗಳನ್ನು ಹೊಂದಿದೆ. ಹಿಂದೂ ಮಹಾಸಾಗರದ ಸನಿಹದಲ್ಲಿರುವುದು ಮತ್ತು ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಭಾರತ ಮತ್ತು ಅಫ್ಘಾನಿಸ್ತಾನದಿಂದ ಸರಕು ಸಾಗಣೆಗೆ ಪರ್ಯಾಯ ವ್ಯಾಪಾರ ಮಾರ್ಗವನ್ನು ಒದಗಿಸುತ್ತದೆ.