* ವಿಶ್ವ ರೋಗನಿರೋಧಕ ದಿನವನ್ನು ವಾರ್ಷಿಕವಾಗಿ ನವೆಂಬರ್ 10 ರಂದು ಆಚರಿಸಲಾಗುತ್ತದೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವಲ್ಲಿ ಲಸಿಕೆಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚೆರಿಸಲಾಗುತ್ತದೆ. * ಪ್ರಪಂಚದಾದ್ಯಂತ ವ್ಯಾಕ್ಸಿನೇಷನ್‌ಗಳ ಪ್ರಾಮುಖ್ಯತೆಯನ್ನು ವಿವರಿಸುವುದು ಮತ್ತು ಇದರ ಬಗ್ಗೆ ಪ್ರಚಾರ ಮಾಡುವುದು, ಮಾರಣಾಂತಿಕ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆಗಳು ವಹಿಸುವ ಪ್ರಾತ್ರದ ಬಗ್ಗೆ ಸರ್ಕಾರಗಳು ಮತ್ತು ವ್ಯಕ್ತಿಗಳಿಗೆ ನೆನಪಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) 2012 ವಿಶ್ವ ರೋಗ ನಿರೋಧಕ ದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್‌ 10 ರಂದು ವಿಶ್ವ ರೋಗನಿರೋಧಕ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.* ರೋಗನಿರೋಧಕತೆಯ ಪ್ರಯೋಜನಗಳು : - ಮಾರಣಾಂತಿಕ ರೋಗಗಳ ತಡೆಗಟ್ಟುವಿಕೆ- ಸಮುದಾಯ ರಕ್ಷಣೆ- ಆರೋಗ್ಯ ವೆಚ್ಚದಲ್ಲಿ ಕಡಿತ- ಜಾಗತಿಕ ಆರೋಗ್ಯ ಭದ್ರತೆ- ರೋಗಗಳ ನಿರ್ಮೂಲನೆ- ರೋಗ ಹರಡುವಿಕೆಯ ಕಡಿತ