* ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಸಚಿವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಸಹಾಯವನ್ನು ವಿಸ್ತರಿಸಲು ನವೀಕರಿಸಿದ ಔಟ್ರೀಚ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು. * ಈ ಕಾರ್ಯಕ್ರಮದ ಭಾಗವಾಗಿ ಸೀತಾರಾಮನ್ ಅವರು ಕರ್ನಾಟಕದಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI) ಶಾಖೆಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ.* ಇದನ್ನು ಹಣಕಾಸು ಸೇವೆಗಳ ಇಲಾಖೆ (DFS), ಹಣಕಾಸು ಸಚಿವಾಲಯ ಮತ್ತು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಜಂಟಿಯಾಗಿ ಆಯೋಜಿಸಿದೆ. * ಕರ್ನಾಟಕದಲ್ಲಿ ತುಮಕೂರು, ರಾಯಚೂರು, ಶಿವಮೊಗ್ಗ, ಕಲಬುರಗಿ, ಮಂಗಳೂರು ಮತ್ತು ವಿಜಯಪುರದಲ್ಲಿ ಆರು ಹೊಸ SIDBI ಶಾಖೆಗಳನ್ನು ಹಣಕಾಸು ಸಚಿವರು ಉದ್ಘಾಟಿಸಿದರು. * ಈ ಶಾಖೆಗಳು MSMEಗಳಿಗೆ SIDBI ಯ ಹಣಕಾಸಿನ ನೆರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಹೆಚ್ಚುವರಿಯಾಗಿ ಮಹಿಳಾ ಉದ್ಯಮಿಗಳ ಸಬಲೀಕರಣಕ್ಕಾಗಿ ಬೆಂಗಳೂರು, ಚೆನ್ನೈ, ಜೈಪುರ ಮತ್ತು ವಿಶಾಖಪಟ್ಟಣಂನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ಕು ನಾರಿ ಶಕ್ತಿ ಶಾಖೆಗಳನ್ನು ಪ್ರಾರಂಭಿಸಲಾಯಿತು. * ಬೆಂಗಳೂರಿನ ಬಾಗಲೂರಿನಲ್ಲಿ ನೂತನ ಕೆನರಾ ಬ್ಯಾಂಕ್ ಕಲಿಕಾ ಕೇಂದ್ರವನ್ನು ಉದ್ಘಾಟಿಸಲಾಯಿತು.* ಈ ಹೊಸ ಔಟ್ರೀಚ್ ಯೋಜನೆಯೊಂದಿಗೆ ಸರ್ಕಾರವು ಎಂಎಸ್‌ಎಂಇಗಳಿಗೆ ಹೆಚ್ಚಿನ ವಿತ್ತೀಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಉದ್ಯಮಿಕತೆ ಮತ್ತು ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುವ ದೃಷ್ಟಿಕೋನವನ್ನು ಹೊಂದಿದೆ.