* ವಿಶ್ವಸಂಸ್ಥೆಯ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನಾಚರಣೆಯನ್ನು ವಾರ್ಷಿಕವಾಗಿ ನವೆಂಬರ್ 10 ರಂದು ಆಚರಿಸಲಾಗುತ್ತದೆ.* ವಿಶ್ವ ವಿಜ್ಞಾನ ದಿನದ 2024 ರ ಥೀಮ್‌:- ಜಾಗತಿಕ ಸವಾಲುಗಳನ್ನು ಪರಿಹರಿಸಲು, ಸುಸ್ಥಿರತೆಯನ್ನು ಉತ್ತೇಜಿಸಲು ಮತ್ತು ಹೆಚ್ಚು ಸಮಾನವಾದ ಜಗತ್ತನ್ನು ನಿರ್ಮಿಸಲು ವಿಜ್ಞಾನವನ್ನು ಬಳಸಿಕೊಳ್ಳುವುದು.* ಶಾಂತಿ ಮತ್ತು ಅಭಿವೃದ್ಧಿಗಾಗಿ ಮೊದಲ ವಿಶ್ವ ವಿಜ್ಞಾನ ದಿನವನ್ನು 2001 ರಂದು ಆರಂಭಿಸಲಾಯಿತು. ಮೊದಲ ವಿಶ್ವ ವಿಜ್ಞಾನ ದಿನವನ್ನು ನವೆಂಬರ್ 10, 2002 ರಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಆಶ್ರಯದಲ್ಲಿ ಆಚರಿಸಲಾಯಿತು.* ವಿಶ್ವಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಡಿಸೆಂಬರ್ 2021 ರಲ್ಲಿ UNGA ನಲ್ಲಿ '2030 ಅಜೆಂಡಾ ಮತ್ತು ಅದರ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಮಗೆ ಹೆಚ್ಚಿನ ಮೂಲಭೂತ ವಿಜ್ಞಾನದ ಅಗತ್ಯವಿದೆ' ಎಂದು ಗುರುತಿಸಲಾಗಿದೆ.* ಇದರ ಉದ್ದೇಶ ವಿಜ್ಞಾನ, ತಂತ್ರಜ್ಞಾನ, ಮತ್ತು ಆವಿಷ್ಕಾರಗಳ ಮಹತ್ವವನ್ನು ಹಂಚಿಕೊಳ್ಳುವುದು, ಮತ್ತು ಮಾನವ ಸಮಾಜದ ಶ್ರೇಯೋಭಿವೃದ್ಧಿಗೆ ವಿಜ್ಞಾನದಲ್ಲಿ ಸಾಧ್ಯವಿರುವ ಸಹಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.