* ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳು ಆಗಿದೆ. ನವೆಂಬರ್ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. * ಈ ಪ್ರಕಾರ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಆರ್‌ಬಿಐ ಹಾಗೂ NPCI ಮಹತ್ವದ 2 ಬದಲಾವಣೆ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಈ ಬದಲಾವಣೆ ಮಾಡಲಾಗಿದೆ.* ನವೆಂಬರ್ 1, 2024ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದೆ. ಈ ಮಹತ್ವದ ಎರಡು ಬದಲಾವಣೆ ಎಂದರೆ ಯುಪಿಐ ವಹಿವಾಟು ಮಿತಿ ಹೆಚ್ಚಳ ಹಾಗೂ ಅಟೋ ಟಾಪ್ ಅಪ್ ಕೂಡ ಜಾರಿ ಮಾಡಲಾಗಿದೆ.* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಇದೀಗ ಯುಪಿಐನಲ್ಲಿ ಈ ಬದಲಾವಣೆ ತಂದಿದೆ.* ಎರಡು ಬದಲಾವಣೆ ಯುಪಿಐ ಲೈಟ್‌ಗೆ ಅನ್ವಯವಾಗಲಿದೆ. ಯುಪಿಐ ಲೈಟ್ ಸಣ್ಣ ವಹಿವಾಟು, ಪಾವತಿ ನಡೆಸಲು ಅನುಮತಿಸುತ್ತದೆ. ಯುಪಿಐ ಲೈಟ್ ಬಳಕೆ ಮಾಡುವ ಬಳಕೆದಾರರು ಹೆಚ್ಚಿನ ಸಮಯ ವ್ಯರ್ಥ ಮಾಡದೇ ಪಾವತಿ ಮಾಡಲು ಸಾಧ್ಯವಿದೆ. * ಸಣ್ಣ ಮೊತ್ತದ ಟ್ರಾನ್ಸಾಕ್ಷನ್‌ ಸುಲಭವಾಗಿ ಯುಪಿಐ ಲೈಟ್ ಮೂಲಕ ಮಾಡಲು ಸಾಧ್ಯವಿದೆ. ಆದರೆ ಪ್ರತಿ ದಿನ ಇಂತಿಷ್ಟೇ ವಹಿವಾಟು, ಇಂತಿಷ್ಚೇ ಮೊತ್ತದ ಮಿತಿ ಇತ್ತು. ಈ ಮಿತಿಯನ್ನು ಹೆಚ್ಚಿಸಲಾಗಿದೆ