* ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶ್ರೀಲಂಕಾದ ಕಾನೂನು ತಜ್ಞೆ ಸುಮತಿ ಧರ್ಮವರ್ದನಾ ಅವರನ್ನು ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ACU) ಹೊಸ ಸ್ವತಂತ್ರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ನವೆಂಬರ್ 1, 2024 ರಿಂದ ಜಾರಿಗೆ ಬರಲಿದೆ. * 14 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸರ್ ರೋನಿ ಫ್ಲಾನಗನ್ ಅವರಿಂದ ತೆರವಾದ ಸ್ಥಾನವನ್ನು ಧರ್ಮವರ್ದನ ಅವರು ವಹಿಸಿಕೊಳ್ಳಲಿದ್ದಾರೆ.* ಶ್ರೀಲಂಕಾದ ಅಟಾರ್ನಿ ಜನರಲ್ ಇಲಾಖೆಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಸುಮತಿ ಅವರು ಶ್ರೀಲಂಕಾ ಕ್ರೀಡಾ ಸಚಿವಾಲಯದ ಪರ ಹಲವು ಕಾನೂನು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. * ಇಂಟರ್‌ಪೋಲ್ ಮತ್ತು ವಿಶ್ವಸಂಸ್ಥೆ ಜತೆಗೆ ಡ್ರಗ್ಸ್ ಮತ್ತು ಕ್ರೈಮ್‌, ಕ್ರೀಡಾ ಭ್ರಷ್ಟಾಚಾರದ ವಿಷಯಗಳ ತನಿಖೆ ಮತ್ತು ಕ್ರೀಡಾ ಕಾಯ್ದೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ ಅಡಿಯಲ್ಲಿ ಕಾನೂನು ಕ್ರಮಗಳ ಕುರಿತಾದ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ.