* ನೂತನ ಕೇಂದ್ರ ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೇಘವಾಲ್ ನೇಮಕವಾಗಿದ್ದರೆ.* ಕೇಂದ್ರ ಕಾನೂನು ಸಚಿವರಾಗಿದ್ದಂತ ಕಿರಣ್ ರಿಜಿಜು ಅವರ ಖಾತೆ ಬದಲಿಸಿ, ಅರ್ಜುನ್ ರಾಮ್ ಮೇಘವಾಲ್ ಅವರಿಗೆ ನೀಡಲಾಗಿದೆ. ಕಿರಣ್ ರಿಜಿಜುಗೆ ಭೂ ವಿಜ್ಞಾನ ಸಚಿವಾಲಯದ ಖಾತೆಯನ್ನು ಹಂಚಿಕೆ ಮಾಡಲಾಗಿದೆ* ಅಚ್ಚರಿಯ ಬೆಳವಣಿಗೆಯಲ್ಲಿ ಕಿರಣ್ ರಿಜಿಜು ಅವರನ್ನು ಕೇಂದ್ರ ಕಾನೂನು ಸಚಿವ ಸ್ಥಾನದಿಂದ ತೆಗೆದು ಅವರ ಜಾಗಕ್ಕೆ ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೇಮಿಸಲಾಗಿದೆ. * ಕೇಂದ್ರ ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಕಿರಣ್ ರಿಜಿಜು ಅವರು ಸುಪ್ರೀಂಕೋರ್ಟ್ ಕೊಲಿಜಿಯಂ ಜತೆ ವಾಕ್ಸಮರ ನಡೆಸುತ್ತಾ ಬಂದಿದ್ದರು. ಬ್ರಿಟಿಷರ ಕಾಲದ ಕೊಲಿಜಿಯಂ ಪದ್ಧತಿ ಅಸಮರ್ಪಕವಾಗಿದೆ ಹಾಗೂ ಪಾರದರ್ಶಕವಾಗಿಲ್ಲ ಎಂದು ಅವರು ಹಲವು ಬಾರಿ ಹೇಳಿದ್ದರು.