* 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾರ್ವೆ ದೇಶವು ತನ್ನ ಗರ್ಭಪಾತಕ್ಕೆ ಸಂಬಂ­ಧಿಸಿದ ಕಾನೂನು ಸಡಿಲುಗೊಳಿಸಲು ಮುಂದಾ­ಗಿದೆ. ಗರ್ಭ ಧರಿಸಿದ 5 ತಿಂಗಳಲ್ಲೂ (18 ವಾರ) ಗರ್ಭಪಾ­ತಕ್ಕೆ ಅವಕಾಶ ಕಲ್ಪಿಸುವುದಕ್ಕೆ ಕಾನೂನು ಮಾನ್ಯತೆ ನೀಡಲಾಗುತ್ತಿದೆ.* ಸದ್ಯಕ್ಕೆ ನಾರ್ವೆಯಲ್ಲಿ 3 ತಿಂಗಳವ­ರೆಗೆ ಮಾತ್ರವೇ ಗರ್ಭಪಾತಕ್ಕೆ ಅವಕಾಶವಿದೆ. ಆದರೆ ಬಹುತೇಕ ಮಹಿಳೆಯರು ಈ ಮಿತಿಯನ್ನು 12ನೇ ವಾರದ ಆಚೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ­ದ್ದರು. ಈ ಕಾಲದ ಅಗತ್ಯಕ್ಕೆ ಅನುಗುಣವಾಗಿ ಕಾನೂ­ನಿನಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. * ಇತ್ತೀಚಿನ ವರ್ಷಗಳಲ್ಲಿ ಯುರೋಪ್‌ನ ಹಲವು ರಾಷ್ಟ್ರಗಳ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಡಿಲಗೊಳಿಸುತ್ತಿವೆ. ಮಹಿಳೆಯರಿಗೆ ಗರ್ಭಧಾರಣೆಯ 18 ನೇ ವಾರದವರೆಗೆ ಗರ್ಭಧಾರಣೆಯನ್ನು ಕೊನೆಗೊಳಿಸಲು ಕಾನೂನುಬದ್ಧವಾಗಿದೆ. ನಾರ್ವೆಯ ಕಾನೂನುಗಳು ಪ್ರಸ್ತುತ 12 ವಾರಗಳವರೆಗೆ ಕಾನೂನುಬದ್ಧ ಗರ್ಭಪಾತವನ್ನು ಅನುಮತಿಸುತ್ತವೆ. ಆದರೆ ಇದೀಗ 18 ವಾರ ಗರ್ಭಪಾ­ತಕ್ಕೆ ಅವಕಾಶ ಕಲ್ಪಿಸುವುದಕ್ಕೆ ಕಾನೂನು ಮಾನ್ಯತೆ ನೀಡಲಾಗುತ್ತಿದೆ.