Job Description: * ನಮಾಮಿ ಗಂಗೆ ಯೋಜನೆ ಅಡಿಯಲ್ಲಿ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಹರಿವ ಗಂಗಾ ನದಿಯ ಉಪನದಿಯ ನಾರಾಯಣಿ ನದಿಗೆ ಒಟ್ಟು 6.62 ಕೋಟಿ ವೆಚ್ಚದ ಎರಡು ಘಾಟ್ ಗಳನ್ನು ನಿರ್ಮಿಸಲಾಗಿದೆ, ಈ ನದಿಯು 46,300 ಕಿಮೀ ಜಲಾಯನ ಪ್ರದೇಶದಲ್ಲಿದ್ದು ಇದು ನೇಪಾಳದಲ್ಲಿದೆ. * ಭಾರತ ಸರಕಾರ 2014 ರಲ್ಲಿ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ನಮಾಮಿ ಗಂಗೆ ಯೋಜನೆಗೆ ಚಾಲನೆ ನೀಡಲಾಗಿತ್ತು, ಪ್ರಧಾನಿ ನರೇಂದ್ರ ಮೋದಿಯವರು ಉತ್ತರಾಖಂಡದಲ್ಲಿ ನಮಾಮಿ ಗಂಗೆ ಯೋಜನೆ ಅಡಿಯಲ್ಲಿ 6 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು.* ನದಿಯ ಜಲ ಮಾಲಿನ್ಯ ತಗ್ಗಿಸಿ ಜೀವಪರಿಸರ ಸಮತೋಲನವನ್ನು ಕಾಪಾಡುವುದು ಜಲ ಜೀವನ ಅಭಿಯಾನದ ಗುರಿಯಾಗಿದೆ.