➤ ಭಾರತವು ಡಿಜಿಟಲ್ ಮೂಲಸೌಕರ್ಯ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇತ್ತೀಚೆಗೆ ಬಿಡುಗಡೆಯಾದ 'ನೆಟ್‌ವರ್ಕ್ ಸಿದ್ಧತೆ ಸೂಚ್ಯಂಕ 2025' (Network Readiness Index - NRI 2025) ವರದಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನಗಳ ಏರಿಕೆ ಕಂಡು 45ನೇ ಸ್ಥಾನವನ್ನು ಅಲಂಕರಿಸಿದೆ. ವಾಷಿಂಗ್ಟನ್ ಡಿಸಿ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ 'ಪೋರ್ಚುಲನ್ಸ್ ಇನ್ಸ್ಟಿಟ್ಯೂಟ್' (Portulans Institute) ಫೆಬ್ರವರಿ 4, 2026 ರಂದು ಈ ವರದಿಯನ್ನು ಬಿಡುಗಡೆ ಮಾಡಿದೆ. ಭಾರತದ ಡಿಜಿಟಲ್ ಪ್ರಗತಿ, ಟೆಲಿಕಾಂ ಹೂಡಿಕೆ ಮತ್ತು ತಾಂತ್ರಿಕ ನಾವೀನ್ಯತೆಗಳನ್ನು ಈ ವರದಿಯು ಶ್ಲಾಘಿಸಿದೆ.ಜಾಗತಿಕ ಶ್ರೇಯಾಂಕ: 45 (127 ದೇಶಗಳ ಪೈಕಿ). ಭಾರತದ ಸ್ಕೋರ್: 54.43 (2024ರಲ್ಲಿ 53.63 ಇತ್ತು). ಆದಾಯ ಗುಂಪು: ಕೆಳ-ಮಧ್ಯಮ ಆದಾಯದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 2ನೇ ಸ್ಥಾನ.➤ ಭಾರತ ನಂ.1 ಸಾಧಿಸಿದ ಕ್ಷೇತ್ರಗಳು : ಈ ವರದಿಯ ಪ್ರಕಾರ:1. ದೂರಸಂಪರ್ಕ ಸೇವೆಗಳಲ್ಲಿ ವಾರ್ಷಿಕ ಹೂಡಿಕೆ: ಪ್ರಥಮ ಸ್ಥಾನ.2. AI ವೈಜ್ಞಾನಿಕ ಪ್ರಕಟಣೆಗಳು: ಕೃತಕ ಬುದ್ಧಿಮತ್ತೆ ಸಂಶೋಧನೆಯಲ್ಲಿ ಅಗ್ರಗಣ್ಯ.3. ICT ಸೇವೆಗಳ ರಫ್ತು: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ಮುಂಚೂಣಿ.4. ಇ-ಕಾಮರ್ಸ್ ಶಾಸನಗಳು: ಡಿಜಿಟಲ್ ವ್ಯವಹಾರಗಳಿಗೆ ಪೂರಕವಾದ ಕಾನೂನು ಚೌಕಟ್ಟು.5. FTTH (Fiber-to-the-Home): ಫೈಬರ್ ಇಂಟರ್ನೆಟ್ ಬಳಕೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನ.6. ಮೊಬೈಲ್ ಬ್ರಾಡ್‌ಬ್ಯಾಂಡ್ ಟ್ರಾಫಿಕ್: ಅತೀ ಹೆಚ್ಚು ಡೇಟಾ ಬಳಕೆಯಲ್ಲಿ 2ನೇ ಸ್ಥಾನ.7. ಮಾರುಕಟ್ಟೆ ಗಾತ್ರ: ದೇಶೀಯ ಮಾರುಕಟ್ಟೆ ವ್ಯಾಪ್ತಿಯಲ್ಲಿ 3ನೇ ಸ್ಥಾನ.➤ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಕಡಿಮೆ ಡೇಟಾ ದರವನ್ನು ಹೊಂದಿದ್ದು, ಪ್ರಸ್ತುತ ದೇಶಾದ್ಯಂತ 5.08 ಲಕ್ಷಕ್ಕೂ ಹೆಚ್ಚು 5G ಬೇಸ್ ಸ್ಟೇಷನ್‌ಗಳನ್ನು (BTS) ಸ್ಥಾಪಿಸಲಾಗಿದೆ.➤ ಡಿಜಿಟಲ್ ಕಂದಕವನ್ನು ಕಡಿಮೆ ಮಾಡಲು ಸರ್ಕಾರವು ಶ್ರಮಿಸುತ್ತಿದ್ದು, ಜೂನ್ 2026ರ ವೇಳೆಗೆ ದೇಶದ ಎಲ್ಲಾ ಹಳ್ಳಿಗಳಿಗೆ 4G ಸೇವೆ ಒದಗಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಯು ಈಗಾಗಲೇ ಸುಮಾರು 97,000ಕ್ಕೂ ಹೆಚ್ಚು 4G ಸೈಟ್‌ಗಳನ್ನು ನಿರ್ಮಿಸಿದೆ. ಶೀಘ್ರದಲ್ಲೇ ಈ ಎಲ್ಲಾ 4G ಟವರ್‌ಗಳನ್ನು 5G ಗೆ ಮೇಲ್ದರ್ಜೆಗೇರಿಸಲಾಗುವುದು.➤ ನೆಟ್‌ವರ್ಕ್ ಸಿದ್ಧತೆ ಸೂಚ್ಯಂಕ (NRI): ಇದು ಒಂದು ದೇಶವು ತಂತ್ರಜ್ಞಾನವನ್ನು (Technology), ಜನರನ್ನು (People), ಆಡಳಿತವನ್ನು (Governance) ಮತ್ತು ಅದರ ಪ್ರಭಾವವನ್ನು (Impact) ಎಷ್ಟು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಅಳೆಯುವ ಮಾಪಕವಾಗಿದೆ. ಇದು ಒಟ್ಟು 53 ಸೂಚಕಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸುತ್ತದೆ.