* ನೈಸರ್ಗಿಕ ರಬ್ಬರ್ ವಲಯದ ಸುಸ್ಥಿರ ಮತ್ತು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಮುಂದಿನ ಎರಡು ಹಣಕಾಸು ವರ್ಷಗಳಾದ 2024-25 ಮತ್ತು 2025-26ರ ಹಣಕಾಸು ವರ್ಷಗಳಲ್ಲಿ ಆರ್ಥಿಕ ನೆರವನ್ನು 576.41 ಕೋಟಿ ರೂ.ಗಳಿಂದ 708.69 ಕೋಟಿ ರೂ.ಗಳಿಗೆ ಅಂದರೆ ಶೇ.23ರಷ್ಟು ಹೆಚ್ಚಿಸಲಾಗಿದೆ.* ಭಾರತವು ವಿಶ್ವದ ಅತಿದೊಡ್ಡ ರಬ್ಬರ್ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ ಮತ್ತು ಸರಕಿನ ಮೂರನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಭಾರತದ ನೈಸರ್ಗಿಕ ರಬ್ಬರ್ ಉತ್ಪಾದನೆಯಲ್ಲಿ ಕೇರಳದ ಪಾಲು ಶೇ.70ರಷ್ಟಿದೆ.* ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಬ್ಬರ್ ಕೃಷಿಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಲು ದೇಶದ ವಿವಿಧ ಕೃಷಿ-ಹವಾಮಾನ ಪ್ರದೇಶಗಳಿಗೆ ಸೂಕ್ತವಾದ ರಬ್ಬರ್ ಕ್ಲೋನ್ ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.