* ಖ್ಯಾತ ಲೇಖಕ ಮತ್ತು ರಾಜತಾಂತ್ರಿಕ- ರಾಜಕಾರಣಿ ಶಶಿ ತರೂ‌ರ್ ಅವರಿಗೆ ಫ್ರಾನ್ಸ್ ಅತ್ಯುನ್ನತ ನಾಗರಿಕ ಗೌರವ 'ಚೆವಾಲಿಯರ್ ಡಿ ಲಾ ಲೀಜನ್ ಡಿ ಹೊನ್ನೂರ್' ಅನ್ನು ಫೆಬ್ರುವರಿ 20 ರಂದು (ಮಂಗಳವಾರ) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.* ಹಲವಾರು ಪುಸ್ತಕಗಳ ಲೇಖಕ ಮತ್ತು ತಿರುವನಂತಪುರಂನ ಕಾಂಗ್ರೆಸ್ ಸಂಸದ ತರೂ‌ರ್ ಅವರಿಗೆ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. * ಫ್ರೆಂಚ್ ಸರ್ಕಾರವು ಮಾಜಿ ಕೇಂದ್ರ ಸಚಿವ ತರೂರ್ ಅವರಿಗೆ ಆಗಸ್ಟ್ 2022 ರಲ್ಲಿ ಪ್ರಶಸ್ತಿಯನ್ನು ಘೋಷಿಸಿತ್ತು.* ಭಾರತ-ಫ್ರೆಂಚ್ ಸಂಬಂಧಗಳನ್ನು ಆಳಗೊಳಿಸಲು ತರೂರ್ ಅವರ ದಣಿವರಿಯದ ಪ್ರಯತ್ನಗಳು, ಅಂತರರಾಷ್ಟ್ರೀಯ ಶಾಂತಿ ಮತ್ತು ಸಹಕಾರಕ್ಕೆ ಬದ್ಧತೆ ಮತ್ತು ಫ್ರಾನ್ಸ್ನ ದೀರ್ಘಕಾಲದ ಸ್ನೇಹಿತನನ್ನು ಗುರುತಿಸಿ ಅತ್ಯುನ್ನತ ಫ್ರೆಂಚ್ ನಾಗರಿಕ ಪ್ರಶಸ್ತಿ ಬಂದಿದೆ” ಎಂದು ಫ್ರೆಂಚ್ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.