* ಪ್ರಾಚೀನ ತಮಿಳು ಇತಿಹಾಸದ ಮರು ಆವಿಷ್ಕಾರದ ಉದ್ದೇಶದಿಂದ ರಾಯಚೂರಿನ ಮಸ್ಕಿ ಸೇರಿದಂತೆ ನೆರೆರಾಜ್ಯಗಳ 4 ಪ್ರದೇಶಗಳಲ್ಲಿ ಉತ್ಖನನ ಕೈಗೆತ್ತಿಕೊಳ್ಳಲಾಗುವುದು ಎಂದು ತಮಿಳು ನಾಡು ಸರಕಾರ ಘೋಷಿಸಿದೆ. * ಕೇರಳದ ಮುಸಿರಿ, ಒಡಿಶಾದ ಪಾಲೂರು, ಆಂಧ್ರದ ವೆಂಗಿ ಮತ್ತು ಕರ್ನಾಟಕದ ಮಸ್ಕಿಯಲ್ಲಿ ಪುರಾತತ್ವ ಉತ್ಖನನ ನಡೆಸಲಿದ್ದೇವೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.- ಉತ್ಖನನ ಎಂದರೇನು? ಭೂಮಿಯಲ್ಲಿ ಹುದುಗಿಹೋಗಿರುವ ಮಾನವ ನಾಗರಿಕತೆಗೆ ಸಂಬಂಧಿಸಿದ ಅವಶೇಷಗಳನ್ನು ಭೂಮಿಯಿಂದ ಅಗೆಯುವುದಕ್ಕೆ ಪುರಾತತ್ತ್ವ ಶೋಧನೆಯಲ್ಲಿ ಬಳಸುವ ಪದ ಉತ್ಖನನ(Excavation).* ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ ಮತ್ತು ಪೂಂಪುಹಾರ್ ಪ್ರವಾಸೋದ್ಯಮ ಅಭಿವೃದ್ಧಿಗೆ 55 ಕೋಟಿ ರೂ. ಅನುದಾನ ಮೀಸಲಿಡುವುದಾಗಿಯೂ ಸಚಿವ ಥೆನ್ನರಸು ಘೋಷಿಸಿದ್ದಾರೆ. ಜತೆಗೆ 7,890 ಕೋಟಿ ರೂ. ವೆಚ್ಚದಲ್ಲಿ ಹೊಗೇನಕಲ್ ಸಂಯೋಜಿತ ನೀರು ಪೂರೈಕೆ ಯೋಜನೆಯ ಎರಡನೇ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.