* ನಾಸಾ-ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್ ಅಪರ್ಚರ್ ರೆಡಾರ್ (ನಿಸಾರ್) ಉಪಗ್ರಹವನ್ನು ಮುಂದಿನ ವರ್ಷ (2024) ಮೊದಲ ಮೂರು ತಿಂಗಳ ಒಳಗಾಗಿ ಉಡಾವಣೆ ಮಾಡುವುದಾಗಿ ನಾಸಾದ ನಿಸಾರ್ ಯೋಜನೆಯ ವ್ಯವಸ್ಥಾಪಕ ಫಿಲ್ ಬರೆಲಾ ಅವರು ತಿಳಿಸಿದ್ದಾರೆ.* ಜಿಎಸ್‌ಎಲ್‌ ವಿ ಮಾರ್ಕ್-2 ರಾಕೆಟ್ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು ಮೂರು ವರ್ಷ ಕಾರ್ಯ ನಿರ್ವಹಿಸಲಿದ್ದು, ಭೂಭಾಗ, ಹಿಮ ಅವ್ಯತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು ಪ್ರತಿ 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ.* ಪಾಸಾದ ಚಟ್ ಪ್ರೊಫೆಲ್ಸನ್ ಲ್ಯಾಬೊರೇಟರಿಯ ನಿರ್ದೇಶಕಿ ಡಾ.ಲೂರಿ ಲೆಕಿನ ಅವರು ನಾಸಾ  ಯೋಜನೆಯು ಈ ಸರಣಿಯಲ್ಲಿ ಈ ಹಿಂದಿನ ಉಪಗ್ರಹಗಳಿಗಿಂತಲೂ ಉತ್ತಮವಾದುದು ಈ ನಿಸಾರ ಆಗಿದೆ ಎಂದು ಹೇಳಿದ್ದಾರೆ. ಈ ಸಾಧನವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಭೂಮಿಯಲ್ಲಿ ಆಗುವ ಬದಲಾವಣೆಗಳನ್ನು ಬಹು ವರ್ಷಗಳ ಕಾಲಮಾಪಕದಲ್ಲಿ ಗಮನಿಸಬಹುದು ಎಂದು ಲೂರಿ ಲೆಕಿನ ಅವರು ಹೇಳಿದರು.* ನಿಸಾರ್ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ, ಎಲ್ಲ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ.