* ಇನ್ಫೋಸಿಸ್ ಸೈನ್ಸ್‌ ಫೌಂಡೇಷನ್ ವೈಜ್ಞಾನಿಕ ಸಂಶೋಧನೆಗೆ ಗಮನಾರ್ಹ ಕೊಡುಗೆ ನೀಡಿರುವ ಆರು ಸಾಧಕರಿಗೆ 2023ನೇ ಸಾಲಿನ 'ಇನ್ಫೋಸಿಸ್' ಪ್ರಶಸ್ತಿಯನ್ನು ನವೆಂಬರ್ 15 ರಂದು ಘೋಷಿಸಿದೆ.* ಆರು ವಿಭಾಗಗಳಾದ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್, ವಿಜ್ಞಾನ, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.* ಇನ್ಫೋಸಿಸ್ ಸೈನ್ಸ್ ಫೌಂಡೇಷನ್ 2008ರಲ್ಲಿ ಆರಂಭಿಸಿದ ಇನ್ಫೋಸಿಸ್ ಪ್ರಶಸ್ತಿಯನ್ನು ಪ್ರತಿ ವಿಭಾಗದಲ್ಲಿ ನೀಡುವ ಪ್ರಶಸ್ತಿ ಚಿನ್ನದ ಪದಕ, ಪ್ರಶಂಸನಾ ಪತ್ರ ಮತ್ತು 1 ಲಕ್ಷ ಅಮೆರಿಕನ್ ಡಾಲರ್ (ರೂಪಾಯಿ ಲೆಕ್ಕದಲ್ಲಿ ಅದಕ್ಕೆ ಸಮನಾದ ಮೊತ್ತ) ನಗದನ್ನು ಒಳಗೊಂಡಿದೆ.* ಕಾನ್ಪುರ ಪ್ರೊ. ಸಚ್ಚಿದಾನಂದ ತ್ರಿಪಾಠಿ (ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ) ಹಾಗೂ ಪ್ರೊ. ಅರುಣ್‌ಕುಮಾರ್ ಶುಕ್ಲಾ (ಜೀವ ವಿಜ್ಞಾನ), ಬೆಂಗಳೂರಿನ ಸೈನ್ಸ್ ಗ್ಯಾಲರಿ ಸಂಸ್ಥಾಪಕ ನಿರ್ದೇಶಕಿ ಜಾಹ್ನವಿ ಫಾಲ್ಕೆ (ಮಾನವಿಕ), ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ ಪ್ರೊ.ಭಾರ್ಗವ್ ಭಟ್ (ಗಣಿತ ವಿಜ್ಞಾನ), ಬೆಂಗಳೂರು ಮೂಲದ ಮತ್ತು ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್ ನ ಪ್ರೊ. ಮುಕುಂದ್ ಫಟ್ಟಿ (ಭೌತವಿಜ್ಞಾನ) ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಕರುಣಾ ಮಂತನಾ (ಸಮಾಜ ವಿಜ್ಞಾನ) ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಈ ಪ್ರಶಸ್ತಿಯು ವಿಜ್ಞಾನ ಮತ್ತು ಸಂಶೋಧನೆಯ ಕ್ಷೇತ್ರದ ಅತ್ಯುತ್ತಮ ಸಾಧನೆಗಳನ್ನು ಗುರುತಿಸುವಲ್ಲಿ ದೇಶದ ಅತಿದೊಡ್ಡ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.