* ಅನ್ಯಗ್ರಹ ಜೀವಿಗಳ ಸಂಶೋಧನೆಗಾಗಿ ನಿರ್ಮಿಸಲಾಗುತ್ತಿದ್ದ ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಶೀಘ್ರದಲ್ಲೇ ತನ್ನ ಕಾರ್ಯಾರಂಭ ಮಾಡಲಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.* ನೈಋತ್ಯ ಚೀನಾದಲ್ಲಿ ನಿರ್ಮಿಸಲಾಗಿರುವ ಬೃಹತ್ ಟೆಲಿಸ್ಕೋಪ್ ಗೆ ಫಾಸ್ಟ್ ಎಂದು ನಾಮಕರಣ ಮಾಡಲಾಗಿದ್ದು, ಇಂದು ಈ ಬೃಹತ್ ಟೆಲಿಸ್ಕೋಪ್ ನ ಪ್ರಾಯೋಗಿಕ ಕಾರ್ಯಾಚರಣೆ  ನಡೆಯಲಿದೆ. * ಸುಮಾರು 500 ಮೀಟರ್ ಅಗಲವಿರುವ ಈ ಟೆಲಿಸ್ಕೋಪ್  4.450 ಗಾಜಿನ ಪ್ಯಾನಲ್ ಗಳನ್ನು ಅಳವಡಿಸಲಾಗಿದ್ದು, ಪ್ರತಿ ಪ್ಯಾನಲ್ 11 ಮೀಟರ್ ಅಗಲವಿದೆ. * ಚೀನಾ  ಆಸ್ಟ್ರೋನಾಮಿಕಲ್ ಆಬ್ಸರೆವೆಟಿವ್ಸ್ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಈ ಬೃಹತ್ ಟೆಲಿಸ್ಕೋಪ್ ಅನ್ನು ನಿರ್ಮಿಸಿದೆ.