* ಕತಾರ್‌ನಲ್ಲಿ ಇಸ್ರೇಲ್ ಪರವಾಗಿ ಬೇಹುಗಾರಿಕೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಯೋಧರನ್ನು ಬಿಡುಗಡೆ ಮಾಡಲಾಗಿದೆ ಎಂದು ಭಾರತ ಫೆಬ್ರುವರಿ 12 ರಂದು ಪ್ರಕಟಿಸಿದೆ.* ಮರಣದಂಡನೆ ಶಿಕ್ಷೆಗೆ ಗುರಿಯಾದ ಸುಮಾರು ಮೂರೂವರೆ ತಿಂಗಳ ನಂತರ ಕತಾರ್ ಎಂಟು ಮಾಜಿ ಭಾರತೀಯ ನೌಕಾ ಸಿಬ್ಬಂದಿಯನ್ನು ಬಿಡುಗಡೆ ಮಾಡಿರುವುದನ್ನು ಕಾಂಗ್ರೆಸ್ ಸಮಾಧಾನ ಮತ್ತು ಸಂತೋಷವನ್ನು ವ್ಯಕ್ತಪಡಿಸಿದೆ.* ಅವರಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಾಕಲಾ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ಸೈಲರ್ ರಾಗೇಶ್ ಎಂಬ ಏಳು ವ್ಯಕ್ತಿಗಳು ಮರಣದಂಡನೆಯಿಂದ ಬಿಡುಗಡೆಯಾದವರು.* 45 ದಿನಗಳ ಹಿಂದೆ ಮರಣದಂಡನೆಗೆ ಗುರಿಯಾಗಿದ್ದ ಯೋಧರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. ಇದಾದ 46 ದಿನಗಳ ಬಳಿಕ ಇವರೆಲ್ಲ ಬಿಡುಗಡೆಯಾಗಿದ್ದಾರೆ.* ಈ ಎಂಟು ಮಂದಿಗೆ ಕತಾರ್ ನ ನ್ಯಾಯಾಲಯವೊಂದು ಅಕ್ಟೋಬರ್ 26 ರಂದು ಮರಣದಂಡನೆ ವಿಧಿಸಿತ್ತು. ಮರಣದಂಡನೆಯನ್ನು ಜೈಲು ಶಿಕ್ಷೆಯನ್ನಾಗಿ ಪರಿವರ್ತಿಸಿ ಕತಾರ್ ನ ಮೇಲ್ಮನವಿ ನ್ಯಾಯಾಲಯವು ಡಿಸೆಂಬರ್ 28 ರಂದು ಆದೇಶ ಹೊರಡಿಸಿತ್ತು.* 2015 ರಲ್ಲಿ ಕತಾರ್ ಮತ್ತು ಭಾರತದ ನಡುವೆ ಆದ ಒಪ್ಪಂದದ ಪ್ರಕಾರ ಕ್ರಿಮಿನಲ್ ಅಪರಾಧ ಎಸಗಿ ಜೈಲುಶಿಕ್ಷೆಗೆ ಗುರಿಯಾದವರಿಗೆ ತಮ್ಮ ದೇಶದಲ್ಲಿ ಆ ಶಿಕ್ಷೆಯನ್ನು ಅನುಭವಿಸಲು ಅವಕಾಶ ಕಲ್ಪಸಲಾಗುತ್ತದೆ.