* ಕಳೆದ ಇಪ್ಪತ್ತು ವರ್ಷಗಳಲ್ಲಿ 2023ರಲ್ಲಿ ಅತಿ ಹೆಚ್ಚು ಕೈದಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು 'ಪ್ರಾಜೆಕ್ಟ್ 39 ಎ' ಪ್ರಕಟಿಸಿದ 'ವಾರ್ಷಿಕ ಮರಣ ದಂಡನಾ ವರದಿ -2023' ಬಹಿರಂಗಪಡಿಸಿದೆ.* ಈ ವರದಿಯ ಪ್ರಕಾರ 2015ರಿಂದ ಮರಣದಂಡನೆ ವಿಧಿಸಲಾದ ಕೈದಿಗಳ ಸಂಖ್ಯೆಯಲ್ಲಿ ಶೇ.47.71 ರಷ್ಟು ಅಧಿಕವಾಗಿದೆ. * ಕಳೆದ ವರ್ಷ ದೇಶದಾದ್ಯಂತ ಅಧೀನ ನ್ಯಾಯಾಲಯಗಳು 120 ಅಪರಾಧಿಗಳಿಗೆ ಮರಣದಂಡನೆ ವಿಧಿಸಿವೆ. ಕಳೆದ ವರ್ಷ ಅಂತ್ಯದ ವೇಳೆಗೆ ದೇಶದ ಎಲ್ಲಾ ನ್ಯಾಯಾಲಯಗಳು 561 ಕೈದಿಗಳಿಗೆ ಮರಣದಂಡನೆ ವಿಧಿಸಿವೆ. * ಪ್ರಾಜೆಕ್ಟ್ 39 ಎ ಎಂಬುದು ದಿಲ್ಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕ್ರಿಮಿನಲ್ ನ್ಯಾಯ ಸಂಶೋಧನೆ ಮತ್ತು ಕಾನೂನು ನೆರವು ಕಾರ್ಯಕ್ರಮವಾಗಿದೆ. * ಆರ್ಥಿಕ ಮತ್ತು ಸಾಮಾಜಿಕ ಅಡೆತಡೆಗಳನ್ನು ತೆಗೆದು ಹಾಕುವ ಮೂಲಕ ಸಮಾನ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಉತ್ತೇಜಿಸುವ ಭಾರತೀಯ ಸಂವಿಧಾನದ ಆರ್ಟಿಕಲ್ 39 ನೆ ಎ ನಿಂದ ಸ್ಫೂರ್ತಿ ಪಡೆದ ಕಾರ್ಯಕ್ರಮ ಇದಾಗಿದೆ.* 2023ರಲ್ಲಿ ದೇಶದಲ್ಲಿರುವ ಅಧೀನ ನ್ಯಾಯಾಲಯಗಳು 120 ಕೈದಿಗಳಿಗೆ ಮರಣದಂಡನೆ ವಿಧಿಸಿವೆ. ಉತ್ತರಪ್ರದೇಶದಲ್ಲಿ 33, ಜಾರ್ಖಂಡ್‌ನಲ್ಲಿ-12,  ಹರಿಯಾಣ, ಗುಜರಾತ್‌ನಲ್ಲಿ ತಲಾ 11, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 10 ಕೈದಿಗಳಿಗೆ ಕೆ ಮರಣದಂಡನೆ ವಿಧಿಸಲಾಗಿದೆ.* ಹೈಕೋರ್ಟ್‌ಗಳು 57 ಪ್ರಕರಣಗಳಲ್ಲಿ 80 ಕೈದಿಗಳಿಗೆ ಮರಣದಂಡನೆ ವಿಧಿಸಿವೆ. ಒಬ್ಬ ಕೈದಿಯನ್ನು ಮಾತ್ರ ನೇಣುಗಂಬಕ್ಕೆ ಏರಿಸಲಾಗಿದೆ. 36 ಕೈದಿಗಳು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿಕೊಂಡಿದ್ದಾರೆ. ಐದು ಪ್ರಕರಣಗಳನ್ನು 3 ಮರು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ. * ಸುಪ್ರೀಂ ಕೋರ್ಟ್ 11 ಕೈದಿಗಳನ್ನು ಒಳಗೊಂಡ 10 ಪ್ರಕರಣಗಳ ಮೇಲ್ಮನವಿಗಳಲ್ಲಿ ಮರಣದಂಡನೆ ವಿಧಿಸಿಲ್ಲ.  * 2008 ರಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾರತದ ರಾಷ್ಟ್ರಪತಿಗಳು ಮಾರ್ಚ್ 2023 ರಲ್ಲಿ ಒಂದು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು ಎಂದು ವರದಿ ಹೇಳಿದೆ. ಒಟ್ಟು 488 ಮರಣದಂಡನೆ ಕೈದಿಗಳು ಉಚ್ಚ ನ್ಯಾಯಾಲಯಗಳಿಂದ ತೀರ್ಪಿಗೆ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.