* ಆಗ್ನೇಯ ಏಷ್ಯಾದ ದೇಶದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ನಡುವೆ ಭಾರತವು ರಫ್ತಿಗಿಂತ ಆಮದು ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಲೇಷ್ಯಾದೊಂದಿಗೆ ತನ್ನ ವ್ಯಾಪಾರ ಒಪ್ಪಂದವನ್ನು ಪರಿಶೀಲಿಸುತ್ತಿದೆ.* ಭಾರತ-ಮಲೇಷ್ಯಾ ಸಮಗ್ರ ಆರ್ಥಿಕ ಸಹಕಾರ ಒಪ್ಪಂದಕ್ಕೆ 2011 ರ ಹಣಕಾಸು ವರ್ಷದಲ್ಲಿ ಸಹಿ ಹಾಕಲಾಯಿತು. ಈ ಒಪ್ಪಂದವು ಎರಡು ದೇಶಗಳಿಗೆ ಸರಕು ಸೇವೆ ಹಾಗೂ ಹೂಡಿಕೆಯನ್ನು ಹೆಚ್ಚಿಸಲು ನೆರವಾಗಿದೆ.* ಭಾರತ ಮತ್ತು ಮಲೇಷ್ಯಾ ವ್ಯಾಪಾರದ ಅಂತರವು $ 2.6 ಶತಕೋಟಿ ಆಗಿತ್ತು, ಇದು FY24 ರಲ್ಲಿ $ 5.5 ಶತಕೋಟಿಗೆ ದ್ವಿಗುಣಗೊಂಡಿದೆ. ಇದು ಉಭಯ ದೇಶಗಳ ನಡುವಿನ ಅಸಮತೋಲನವನ್ನು ಪ್ರತಿಬಿಂಬಿಸತ್ತದೆ.* ವಾಣಿಜ್ಯ ಇಲಾಖೆಯು ಮಲೇಷ್ಯಾಕ್ಕೆ ರಫ್ತು ಮಾಡುವಾಗ ಭಾರತೀಯ ಉದ್ಯಮವು ಎದುರಿಸುತ್ತಿರುವ ಸುಂಕ ರಹಿತ ಅಡೆತಡೆಗಳ ಪಟ್ಟಿಯನ್ನು ಸಹ ರಚಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಆರ್ಥಿಕ ಸಂಭಂದವನ್ನು ಬಲಪಡಿಡುವುದು ಮತ್ತು ವ್ಯಾಪಾರ ಹೆಚ್ಚಿಸುವುದು ಈ ಒಪ್ಪಂದದ ಗುರಿಯಾಗಿದೆ. ಆದರೆ ಬೆಳೆಯುತ್ತಿರುವ ವ್ಯಾಪಾರದ ಕೊರತೆಯು ಒಪ್ಪಂದದ ಕೆಲವು ನಿಯಮಗಳನ್ನು ಪರಿಶೀಲಿಸುವಂತೆ ಮಾಡಿದೆ.