* ಹಿರಿಯ ಕ್ರೀಡಾ ಆಡಳಿತಗಾರ ರಣಧೀರ್ ಸಿಂಗ್ ಅವರು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ Olympic Council of Asia (OCA)ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. * ಸೆಪ್ಟೆಂಬರ್ 08 ರವಿವಾರ ನಡೆದ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ)ದ 44ನೇ ಸಾಮಾನ್ಯ ಸಭೆಯಲ್ಲಿ ರಣಧೀರ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಐದು ಬಾರಿ ಒಲಿಂಪಿಕ್ ಶೂಟರ್ ಆಗಿರುವ ರಣಧೀರ್ ಸಿಂಗ್ ಅವರು ಒಸಿಎ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಇವರ ಅಧಿಕಾರಾವಧಿ 2024 ರಿಂದ 2028 ರವರೆಗೆ ಇರಲಿದೆ.* ಇದಕ್ಕೂ ಮುನ್ನ ಕುವೈತ್ನ ಶೇಖ್ ಅಹ್ಮದ್ ಅಲ್-ಫಹಾದ್ ಅಲ್-ಸಬಾಹ್ ಒಸಿಎ ಅಧ್ಯಕ್ಷರಾಗಿದ್ದರು. ಆದರೆ ನೈತಿಕ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಇವರು ಮುಂದಿನ 15 ವರ್ಷಗಳ ಕಾಲ ಯಾವುದೇ ಕ್ರೀಡಾ ಆಡಳಿತದ ಹುದ್ದೆಯನ್ನು ವಹಿಸಿಕೊಳ್ಳದಂತೆ ಈ ವರ್ಷದ ಮೇ ತಿಂಗಳಲ್ಲಿ ಇವರ ಮೇಲೆ ನಿಷೇಧ ವಿಧಿಸಲಾಗಿದೆ.* ಐದು ಬಾರಿ ಒಲಿಂಪಿಕ್ ಶೂಟರ್ ಆಗಿರುವ ರಣಧೀರ್ ಅವರು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ರಣಧೀರ್ ಅವರ ಅಧಿಕಾರವಧಿ 2024 ರಿಂದ 2028ರವರಗೆ ಇರಲಿದೆ.* ಸಿಂಗ್ ಅವರ ತಂದೆ ಭಲೀಂದ್ರ ಸಿಂಗ್ ಕೂಡಾ ಕ್ರಿಕೆಟಿಗರಾಗಿದ್ದು 1947ರಿಂದ 1992ರವರೆಗೆ ಐಒಸಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ರಣಧೀರ್ ಸ್ವತಃ 2001ರಿಂದ 2014ರವರೆಗೆ ಐಒಸಿ ಸದಸ್ಯರಾಗಿದ್ದರು. ಗೌರವ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.