* ಮೇ 24ರಂದು ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ಗಳಿರುವ ಕ್ವಾಡ್ ರಾಷ್ಟ್ರ ಗಳ ಸಮಾವೇಶವು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಸಭೆಯ ಆತಿಥ್ಯವನ್ನು ವಹಿಸುತ್ತದೆ.* ಈ ಕ್ವಾಡ್ ಸಮಾವೇಶದಲ್ಲಿ - ಭಾರತದ ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಜೋ ಬೈಡನ್- ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ - ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನಿಸ್  ಭಾಗವಹಿಸಲಿದ್ದಾರೆ.* ತಂತ್ರ ಜ್ಞಾನಗಳು, ಅತ್ಯುನ್ನತ ಮೂಲಭೂತ ಸೌಕರ್ಯಗಳು ಜಾಗತಿಕ ಆರೋಗ್ಯ, ಹವಾಮಾನ ವೈಪರೀತ ರಾಷ್ಟ್ರೀಯ ಭದ್ರತೆ, ವಿಪತ್ತುಗಳ ಬಗೆ, ಜಾಗೃತಿ, ಇಂಡೋಪೆಸಿಫಿಕ್ ವಲಯದಲ್ಲಿ ಬರುವ ಇತರೆ ಸಮಸ್ಯೆಗಳ ಬಗ್ಗೆ  ನಾಲ್ಕೂ ರಾಷ್ಟ್ರಗಳು ಚರ್ಚೆ ನಡೆಸುತ್ತವೆ.