Job Description: * ಪ್ರತಿ ವರ್ಷ ಮಾರ್ಚ್‌ 23. ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಹವಾಮಾನ ದಿನದ ಥೀಮ್‌ ' ಸೂರ್ಯ, ಭೂಮಿ ಮತ್ತು ಹವಾಮಾನ' ಎಂಬುದಾಗಿದೆ.* ಭಾರತದಲ್ಲಿ ಆಯಾ ಹವಾಮಾನವನ್ನು ಅವಲಂಬಿಸಿ ವಿವಿಧ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಹವಾಮಾನಕ್ಕೆ ಇರುವ ಈ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಆ ದಿನವೇ ಮಾರ್ಚ್‌ 23. ಈ ದಿನವನ್ನು ವಿಶ್ವ ಹವಾಮಾನ ದಿನ ಎಂದು ಆಚರಿಸಲಾಗುತ್ತದೆ.* 1950ರ ಮಾರ್ಚ್‌ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದ ದಿನವಾಗಿದೆ. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು.* ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯಗಳ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.