Job Description: * ಪ್ರತಿ ವರ್ಷ ಮಾರ್ಚ್ 20 ರಂದು ಅಂತರರಾಷ್ಟ್ರೀಯ ಸಂತಸದ ದಿನ (International day of happiness)ವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್‌ - ಯಾವಾಗಲೂ ಖುಷಿಯಿಂದಿರಿ, ಕೃತಜ್ಞತೆಯ ಭಾವ ಇರಲಿ ಹಾಗೂ ದಯಾಮಯಿಗಳಾಗಿರಿ.* 2013ರಿಂದ ವಿಶ್ವಸಂಸ್ಥೆಯು ಈ ಆಚರಣೆಗೆ ಅಧಿಕೃತವಾಗಿ ಆಚರಿಸಲು ಅವಕಾಶ ಕಲ್ಪಿಸಿದೆ. ಪ್ರಪಂಚದಾದ್ಯಂತ ಜನರು ತಮ್ಮ ಜೀವನದಲ್ಲಿ ಸಂತೋಷದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವ ಸಲುವಾಗಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ.* ಅಂತರರಾಷ್ಟ್ರೀಯ ಸಂತೋಷದ ದಿನ ಆರಂಭಕ್ಕೂ ಮೊದಲು, ವರ್ಲ್ಡ್ ಹ್ಯಾಪಿನೆಸ್ ಫೌಂಡೇಶನ್‌ನ ಅಧ್ಯಕ್ಷ ಲೂಯಿಸ್ ಗಲ್ಲಾರ್ಡೊ ಹಾಗೂ ಜೇಮ್ ಇಲಿಯನ್ ʼಹ್ಯಾಪಿಟಲಿಸಂʼ ಅನ್ನು ಸ್ಥಾಪಿಸಿದರು. * ಸಂತೋಷ, ಯೋಗಕ್ಷೇಮ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸಲು ಮತ್ತು ಮುನ್ನಡೆಸಲು ಇಲಿಯನ್ 2006 ರಿಂದ 2012ರವರೆಗೆ ವಿಶ್ವಸಂಸ್ಥೆಯಲ್ಲಿ ಅಭಿಯಾನವನ್ನು ನಡೆಸಿದ್ದರು.