Job Description: * ಮ್ಯೂಸಿಕ್ ಅಕಾಡೆಮಿ ನೀಡುವ ಪ್ರತಿಷ್ಠಿತ 'ಸಂಗೀತ ಕಲಾನಿಧಿ', 'ಸಂಗೀತ ಕಲಾ ಅಚಾರ್ಯ' ಹಾಗೂ ಟಿಟಿಕೆ ಪ್ರಶಸ್ತಿ ಗಳನ್ನು ಮಾರ್ಚ್ 19 ರಂದು ಪ್ರಕಟಿಸಲಾಗಿದೆ.* ಕರ್ನಾಟಕ ಶಾಸ್ತ್ರೀಯ ಗಾಯಕಿ ಬಾಂಬೆ ಜಯಶ್ರೀಯವರನ್ನು 'ಸಂಗೀತ ಕಲಾನಿಧಿ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಖ್ಯಾತ ಭರತನಾಟ್ಯ ಹಾಗೂ ಕುಚಿಪುಡಿ ಕಲಾವಿದೆ ವಸಂತಲಕ್ಷ್ಮಿ ನರಸಿಂಹಾಚಾರಿ ಅವರನ್ನು 'ನೃತ್ಯ ಕಲಾನಿಧಿ' ಪ್ರಶಸ್ತಿಗೆ ಪಾಲ್‌ಕುಳಂಗರ ಅಂಬಿಕಾದೇವಿ ಹಾಗೂ ಕೆ.ಎಸ್.ಕಾಳಿದಾಸ ಅವರನ್ನು 'ಸಂಗೀತ ಕಲಾ ಆಚಾರ್ಯ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.* ತಂಜಾವೂರಿನ ತಿರುನಾಗೇಶ್ವರಂ ಟಿ.ಆರ್. ಸುಬ್ರಮಣಿಯಮ್ ಹಾಗೂ ಸರಗೂರು ನಾಥ ಓದುವಾರ್ ಅವರನ್ನು 'ಟಿಟಿಕೆ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, 'ಸಂಗೀತ ಶಾಸ್ತ್ರಜ್ಞ ಪ್ರಶಸ್ತಿಗೆ ಡಾ.ಎ.ಎಸ್.ಪದ್ಮ ನಾಭನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎನ್.ರವಿ ಅವರು ತಿಳಿಸಿದ್ದಾರೆ.* ಮ್ಯೂಸಿಕ್ ಅಕಾಡೆಮಿಯ 97ನೇ ವಾರ್ಷಿಕ ಸಂಗೀತ ಸಮ್ಮೇಳನ ಹಾಗೂ `ಕಛೇರಿಗಳು ಡಿ.15ರಿಂದ 2024ರ ಜ.1ರವರೆಗೆ ನಡೆಯಲಿದ್ದು, ವಿದುಷಿ ಬಾಂಬೆ ಜಯಶ್ರೀ ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಈ ಪ್ರಶಸ್ತಿಗಳನ್ನು 2024ರ ಜನ ವರಿ 1 ಹಾಗೂ 3ರಂದು ಪ್ರದಾನ ಮಾಡಲಾಗುತ್ತದೆ.