* ರಷ್ಯಾದ ಬಾಹ್ಯಾಕಾಶ ಸಂಸ್ಥೆ 'ರೂಸೋಸ್ಮಾಸ್' ನಿಂದ ಆಗಸ್ಟ್ 13 ರಂದು 'ಲೂನಾ -25' ಗಗನ ನೌಕೆಯಲ್ಲಿನ ವೈಜ್ಞಾನಿಕ ಉಪಕರಣಗಳು ಕಾರ್ಯಾರಂಭ ಮಾಡಿದ ಬಳಿಕ ಲಭ್ಯವಾದ ಮೊದಲ ದತ್ತಾಂಶಗಳನ್ನು ವಿಜ್ಞಾನಿಗಳು ವಿಶ್ಲೇಷಿಸಲು ಆರಂಭಿಸಿದ್ದಾರೆ. * 'ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನತ್ತ 'ಲೂನಾ 25' ಗಗನ ನೌಕೆಯ ಸ್ವಯಂ ಚಾಲಿತ ಕೇಂದ್ರದ ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರೊಂದಿಗಿನ ಸಂವಹನ ಸ್ಥಿರವಾಗಿದೆ. * ಆಗಸ್ಟ್ 21-23ರ ನಡುವೆ 'ಲೂನಾ-25' ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ತಲುಪಲಿದ್ದು, 'ಚಂದ್ರಯಾನ-3'ರ ಸಾಫ್ಟ್‌ ಲ್ಯಾಂಡಿಂಗ್ ಆಗಸ್ಟ್ 23ರಂದು ನಿಗದಿಯಾಗಿದೆ.