*  ಭಾರತೀಯ ಜೀವ ವಿಮಾ ನಿಗಮ (LIC)ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಆರ್. ದೊರೈಸ್ವಾಮಿ ಅವರನ್ನು ನೇಮಿಸಲಾಗಿದೆ, ಸೆಪ್ಟೆಂಬರ್ 1, 2023 ರಿಂದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.* ಈ ಹಿಂದೆ ಎಲ್‌ಐಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸತ್ ಪಾಲ್ ಭಾನೂ(Sat Pal Bhanoo)ಅವರು ಕಾರ್ಯ ನಿರ್ವಹಿಸುತ್ತಿದ್ದರು.* ಪ್ರಸ್ತುತ ಎಲ್ಐಸಿ ನಾಲ್ವರು ಎಂಡಿಗಳನ್ನು ಹೊಂದಿದೆ. ಮಿನಿ ಐಪೆ, ಎಂ. ಜಗನ್ನಾಥ್, ತಬ್ಲೇಷ್ ಪಾಂಡೆ ಹಾಗೂ ಸತ್ಪಲ್ ಭಾನೂ ಎಲ್ಐಸಿ ಎಂಡಿಗಳಾಗಿದ್ದಾರೆ. * ಎಲ್ಐಸಿ ಇನ್ಫೋಸಿಸ್ ನ ಅತೀದೊಡ್ಡ ಷೇರುದಾರ ಸಂಸ್ಥೆಯಾಗಿದೆ, ಅಲ್ಲದೆ ವಿಮಾ ಕಂಪನಿಗಳ ಪೈಕಿ ಅತೀಹೆಚ್ಚು ಷೇರುಗಳನ್ನು ಹೊಂದಿರುವ ಸಂಸ್ಥೆ ಕೂಡ ಆಗಿದೆ. *