* ಒಂದೇ ಕ್ಷೇತ್ರದಲ್ಲಿ ಸತತವಾಗಿ 8ನೇ ಭಾರಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಬಸವರಾಜ ಹೊರಟ್ಟಿಯವರ ಹೆಸರು ಲಿಮ್ಕಾ ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿಸಲಾಗಿದೆ.* 2024ನೇ ಸಾಲಿನ ವಾರ್ಷಿಕ ಪುಸ್ತಕ ಇದೀಗ ಪ್ರಕಟವಾಗಿದ್ದು, ಬಸವರಾಜ ಹೊರಟ್ಟಿ ಅವರ ದಾಖಲೆಗಳನ್ನು ಪ್ರಕಟಿಸಲಾಗಿದೆ. ಹೊರಟ್ಟಿ ಅವರು ವಿಧಾನ ಪರಿಷತ್ ಪ್ರವೇಶಿಸಿ ಇಂದಿಗೆ (ಜ.24) 43 ವರ್ಷ 201 ದಿನಗಳಾಗಿವೆ.* ಹೊರಟ್ಟಿಯವರು ರಿಂದ 1980ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.* ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಜನಿಸಿರುವ ಹೊರಟ್ಟಿ, ರೈತಾಪಿ ಕುಟುಂಬದಲ್ಲಿ ಜನಿಸಿದ್ದವರು. ಪ್ರಾಥಮಿಕ, ಫ್ರೌಡ ಶಿಕ್ಷಣವನ್ನ ಮುಗಿಸಿದ್ದ ಅವರು ಹುಬ್ಬಳ್ಳಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಅಲ್ಲದೆ 1975 ರಿಂದ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.* ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪಟ್ಟಿಯಲ್ಲಿ ಪವನ್ ಕುಮಾರ್ ಅವರ ಹೆಸರನ್ನು ಸೇರಿಸಲಾಗಿದೆ. ಸಿಕ್ಕಿಂ ರಾಜ್ಯದ ಮಾಜಿ ಸಿಎಂ ಪವನ್ ಕುಮಾರ್ ಅವರು ಭಾರತದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದಾರೆ. 12 ಡಿಸೆಂಬರ್ 1994 ರಿಂದ 26 ಮೇ 2019 ವರೆಗೆ ಅಂದರೆ 24 ವರ್ಷ 165 ದಿನಗಳು ಐದು ಭಾರಿ ಮುಖ್ಯಮಂತ್ರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. * ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ದಾಖಲೆಯನ್ನು ಪವನ್ ಕುಮಾರ್ ಅವರು ಮೀರಿಸಿದ್ದಾರೆ.