Job Description: * ಹಣ್ಣು ಕೃಷಿ ಹರಿಕಾರರಾದ ಡಾ .ಎಲ್.ಸಿ. ಸೋನ್ಸ್ ರವರು ಮೂಡಬಿದರಿ ಸಮೀಪದ ಬೆಳುವಾಯಿಯ ಸೋನ್ಸ್ ಫಾರ್ಮ್ ನಲ್ಲಿ ಏಪ್ರಿಲ್ 5 ರಂದು ನಿಧನರಾಗಿದ್ದಾರೆ. ಕೃಷಿ ರಂಗದಲ್ಲಿ ಸೋನ್ಸ್ ರವರು ರಂಬುಟಾನ್, ಡುರಿಯನ್, ಎಗ್ ಫ್ರೂಟ್ ಟ್ರೀಗಳಂತಹ ಅನೇಕ ರೀತಿಯ ಹಣ್ಣುಗಳನ್ನು ಭಾರತಕ್ಕೆ ಪರಿಚಯಿಸಿದ್ದಾರೆ. ಸೋನ್ಸ್ ಫಾರ್ಮ್ ಅನಾನಸ್ ಮಾವು ಮತ್ತು ವಿವಿಧ ಬಿದಿರುಗಳಿಗೆ ಹೆಸರುವಾಸಿಯಾಗಿದೆ.* ಸೋನ್ಸ್ ಅವರಿಗೆ ಕರ್ನಾಟಕ ಸರಕಾರವು ಅತ್ಯುತ್ತಮ ತೋಟಗಾರಿಕಾ ತಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು, ಇದರ ಜೊತೆಗೆ ಸೋನ್ಸ್ ಅವರಿಗೆ 1966 ರಲ್ಲಿ ಅಮೇರಿಕಾದ ಮೊಂಟಾನಾ ವಿಶ್ವ ವಿದ್ಯಾಲಯವು ಅಲುಮ್ನಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.