Job Description: * ಉಕ್ರೇನ್ ನಲ್ಲಿ ಸುಮಾರು 2000 ಮಿಲಿಟರಿ ಸಿಬ್ಬಂದಿಗೆ ತರಬೇತಿ ನೀಡುವ ಕುರಿತಾಗಿ ಆಪರೇಷನ್ ಇಂಟರ್ ಫ್ಲೆಕ್ಸ್ ಅನ್ನು ಪ್ರಾರಂಭಿಯಿಸಲಾಯಿತು. ಇದು 2022 ಜೂನ್ ನಲ್ಲಿ ಪ್ರಾರಂಭವಾಗಿ ಒಟ್ಟು 5 ವಾರಗಳ ಕಾಲ ನಡೆದಿದೆ. * ಆಪರೇಷನ್‌ ಇಂಟರ್‌ಪ್ಲೆಕ್ಸ್‌ನ ಕೆನಡ ಯುಕೆ ತರಬೇತಿ ವಿಭಾಗದ ನೇತೃತ್ವವನ್ನು ಮೇಜ‌ ಜುರ್ಗೆನ್ ಮಿರಾಂಡಾ ವಹಿಸಿದ್ದರು. ಬ್ರಿಟನ್‌ನ 150 ಹಾಗೂ ಕೆನಡದ 60 ಸಹಿತ 200ಕ್ಕೂ ಹೆಚ್ಚು ಸಿಬ್ಬಂದಿ ತರಬೇತಿ ತಂಡದಲ್ಲಿದ್ದರು.* ಆಪರೇಷನ್ ಇಂಟರ್ ಫ್ಲೆಕ್ಸ್ ತರಬೇತಿಯ ಉದ್ದೇಶ : ಕಾರ್ಯಾಚರಣೆ ನಡೆಸಲು ಮಹತ್ವದ ಕೌಶಲ ಮತ್ತು ಅನುಭವಗಳನ್ನು ಒದಗಿಸುವದು ಇದರ ಮುಖ್ಯ ಉದ್ದೇಶವಾಗಿದೆ.* ಶಸ್ತ್ರಾಸ್ತ್ರ ನಿರ್ವಹಣೆ, ರೇಂಜ್ ಚಟುವಟಿಕೆ, ಮಾರ್ಕ್ಸ್ ಮನ್‌ಶಿಪ್, ಫೀಲ್ಡ್‌ಕ್ರಾಪ್‌ ಬೇಸಿಕ್ಸ್, ಕ್ಷೇತ್ರ ಕಾರ್ಯತಂತ್ರ (ಫೀಲ್ಡ್ ಟ್ಯಾಕ್ಟಿಕ್ಸ್), ಸಮರ ಸಾವುನೋವು ಕಸರತ್ತು, ಸ್ಫೋಟಕ ನಿರೋಧಕ, ಸಶಸ್ತ್ರ ಸಂಘರ್ಷಗಳ ಕಾನೂನು, ಪ್ರಥಮ ಚಿಕಿತ್ಸೆ ಮತ್ತು ಸೈಬರ್ ಭದ್ರತೆ ಅರಿವು ಮೊದಲಾದ ವಿಚಾರಗಳ ಮೇಳೆ ಈ ತರಬೇತಿ ಗಮನ ಕೇಂದ್ರೀಕರಿಸಿತ್ತು.* 14 ಚಾಲೆಂಜರ್ 2 ಟ್ಯಾಂಕ್‌ಗಳು, 155 ಎಂಎಂ ಸೆಲ್ಫ್ ಪ್ರೊಪೆಲ್ಡ್ ಗನ್ ಗಳು, ನೂರಾರು ಸಶಸ್ತ್ರ ಹಾಗೂ ರಕ್ಷಿತ ವಾಹನಗಳು, 10,000ಕ್ಕೂ • ಹೆಚ್ಚು ಟ್ಯಾಂಕ್-ನಿರೋಧಕ ಕ್ಷಿಪಣಿಗಳು ಮತ್ತು ಬಹುವಿಧ ಲಾಂಚ್ ರಾಕೆಟ್ ವ್ಯವಸ್ಥೆಗಳು ಮೊದಲಾದವನ್ನು ಉಕ್ರೇನ್‌ಗೆ ಬ್ರಿಟನ್‌ ಈ ಒದಗಿಸಿದೆ.