Job Description: * ವಿಶ್ವದಲ್ಲಿಯೇ ಮೊದಲನೇ ಬಾರಿಗೆ ಚಾಲಕ ರಹಿತ ಬಸ್ ಸೇವೆ ಒದಗಿಸಲು ಸ್ಕಾಟ್ಲಂಡ್ ಮುಂದಾಗಿದೆ. ಚಾಲಕ ಇಲ್ಲದೆ ಸ್ವಯಂ ಚಾಲನೆ ಪಡೆಯುವ 5 ಬಸ್ ಗಳು ಮೇ 15 ರಿಂದ ಪೂರ್ವ ಸ್ಕಾಟ್ಲಂಡ್ ನ ಪ್ರಮುಖ ರಸ್ತೆಯಲ್ಲಿ ಓಡಾಡಲಿವೆ. * ಪ್ರತಿ ವಾರ 10 ಸಾವಿರ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಈ ಬಸ್ ಗಳು ಹೊಂದಿದ್ದು ಸೆರ್ನ್ಸಾ ಬಳಸಿ ಮೊದಲೇ ಆಯ್ಕೆ ಮಾಡಿದ ರಸ್ತೆಗಳಲ್ಲಿ ಬಸ್‌ ಸಂಚರಿಸುತ್ತದೆ. ಹಾಗಿದ್ದರೂ ಇಬ್ಬರು ಸಿಬ್ಬಂದಿ ನಿರ್ವಹಿಸಬೇಕಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ ಚಾಲಕನ ಸೀಟಿನಲ್ಲಿ ಕುಳಿತ ಚಾಲಕ ತಾಂತ್ರಿಕ ಮೇಲ್ವಿಚಾರಣೆ ಮಾಡುತ್ತಾನೆ.