Job Description: * ಕಳೆದ ತಿಂಗಳು ಮಾರ್ಚ್ ನಲ್ಲಿ ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) 1.60 ಲಕ್ಷ ಕೋಟಿ ರೂ. ಮೊತ್ತದಲ್ಲಿ ಕರ್ನಾಟಕದ ಪಾಲು 10,360 ಕೋಟಿ ರೂ. ಇದೆ. ಈ ಮೂಲಕ ಅದು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಮಟ್ಟಿಗೆ ಹೇಳುವುದಿದ್ದರೆ, ಶೇ.18.4 ಏರಿಕೆಯಾಗಿದೆ.* ಮಹಾರಾಷ್ಟ್ರದಿಂದ 22,695 ಕೋಟಿ ರೂ. ಸಂಗ್ರಹವಾಗುವ ಮೂಲಕ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ. ಗುಜರಾತ್‌ನಿಂದ 9,919 ಕೋಟಿ ರೂ. ಸಂಗ್ರಹವಾಗಿ ಮೂರನೇ ಸ್ಥಾನ ಪಡೆದುಕೊಂಡಿದೆ.* ದಿಲ್ಲಿಯ ನೆರೆಯ ರಾಜ್ಯವಾಗಿರುವ ಹರಿಯಾಣ ಈ ಬಾರಿ 7,780 ಕೋಟಿ ರೂ. ಕೊಡುಗೆ ನೀಡುವ ಮೂಲಕ ಐದನೇ ಸ್ಥಾನ ಪಡೆದುಕೊಂಡಿದೆ.