Job Description: * ಆಸ್ಟ್ರೇಲಿಯಾ ಆಟಗಾರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಟಿಮ್ ಪೈನ್ ಅವರು ಕ್ರಿಕೆಟ್ ನ ಎಲ್ಲ ಮಾದರಿಗೆ ಮಾರ್ಚ್ 17 ರಂದು ನಿವೃತ್ತಿ ಘೋಷಿಸಿದ್ದಾರೆ.* ಪೇನ್ ರವರು ಮಾರ್ಚ್ 17 ರಂದು ಆಸ್ಟ್ರೇಲಿಯಾ ದೇಸಿ ಕ್ರಿಕೆಟ್ ನಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧದ ತಾಸ್ಮೆನಿಯಾ ತಂಡದ ಪರ ತಮ್ಮ ಕೊನೆಯ ಪಂದ್ಯವನ್ನು ಆಡುವದರ ಜೊತೆಗೆ ನಿವೃತ್ತಿ ಘೋಷಿಸಿದರು.* ವಿಕೆಟ್‌ಕೀಪರ್ ಪೈನ್ 2018 ಮತ್ತು 2021 ರ ಆರಂಭದಲ್ಲಿ 23 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾದ ನಾಯಕತ್ವ ವಹಿಸಿದ್ದರು, ಒಟ್ಟಾರೆ 35 ಟೆಸ್ಟ್‌ಗಳನ್ನು ಆಡಿದರು. * ಆಸ್ಟ್ರೇಲಿಯಾದ 2018 ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬಾಲ್ ಟ್ಯಾಂಪರಿಂಗ್ ಹಗರಣದ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ಅವರ ನಾಯಕತ್ವವನ್ನು ತೆಗೆದುಹಾಕಿದ ನಂತರ ಅವರು ಆಸ್ಟ್ರೇಲಿಯಾದ 46 ನೇ ಟೆಸ್ಟ್ ನಾಯಕರಾದರು.