* ಕೆನರಾ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭವೇಂದ್ರ ಕುಮಾರ್ ಅವರ ಅಕ್ಟೋಬರ್ 09 ರಂದು  ಅಧಿಕಾರ ವಹಿಸಿಕೊಂಡರು.* ಭವೇಂದ್ರ ಕುಮಾರ್ ಅವರನ್ನು ಕೆನರಾ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ ಎಂದು ಹಣಕಾಸು ಸೇವಾ ಇಲಾಖೆ ಅಧಿಸೂಚನೆ ತಿಳಿಸಿದೆ.* 1997ರಲ್ಲಿ ಕೆನರಾ ಬ್ಯಾಂಕ್‌ನ ಅಧಿಕಾರಿಯಾಗಿ ನೇಮಕವಾದ ಅವರು, ಕರ್ನಾಟಕ ಸೇರಿದಂತೆ ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ಚಂಡೀಗಢ, ನವದೆಹಲಿ ಮತ್ತು ಶಾಂಘೈ ಶಾಖೆ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.* 2018ರಲ್ಲಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ, 2022ರಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಮತ್ತು ಬ್ಯಾಂಕ್‌ನ ದೆಹಲಿ ವಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.