* ಪ್ರಜಾ ವಾಣಿ ಪತ್ರಿಕೆಯ ನಿವೃತ ಕಾರ್ಯ ನಿರ್ವಾಹಕ ಸಂಪಾದಕರು ಜಿ ಎನ್ ರಂಗನಾಥ ರಾವ್ ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೊಗ್ಯದಿಂದ ಬಳಲುತ್ತಿದ್ದ ಅವರು ಬಸವನಗುಡಿಯ ಬಿಎಂಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1942ರಲ್ಲಿ ಹಾರೋಹಳ್ಳಿಯಲ್ಲಿ ಜನಿಸಿದ ಅವರು, ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಮಾಡಿದರು.* ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ 1960ರಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಜಿ.ಎನ್.ಆರ್. ಮುಂದೆ ‘ಪ್ರಜಾವಾಣಿ’ ಪತ್ರಿಕೆಗೆ ಸೇರ್ಪಡೆಯಾದರು. ಹಂತ ಹಂತವಾಗಿ ಔನ್ನತ್ಯ ಸಾಧಿಸಿದ ಜಿ.ಎನ್.ಆರ್. ಪ್ರಜಾವಾಣಿ ಪತ್ರಿಕಾ ಸಮೂಹದ ‘ಕಾರ್ಯನಿರ್ವಾಹಕ ಸಂಪಾದಕ’ ಹುದ್ದೆಗೇರಿ ನಿವೃತ್ತರಾದರು.ಅವರು ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ, ಸುಧಾ ವಾರ ಪತ್ರಿಕೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ನೂರಾರು ಹೊಸ ಬರಹಗಾರರಿಗೆ ಉತ್ತೇಜನ ನೀಡಿದ್ದರು.* ರಂಗನಾಥ ರಾವ್ ಅವರ ನಿನ್ನೆಯ ನಾಳೆಗಳು-ಕವನ ಸಂಕಲನ. ಇದು ಅವರ ಕೊನೆಯ ಕೃತಿ. ತಮ್ಮ ಪತ್ನಿ ಸರಳಾ ಅವರ ಸ್ಮರಣಾರ್ಥ ಶ್ರೀಮತಿ ಸರಳಾ ರಂಗನಾಥ ರಾವ್ ಸಾಂಸ್ಕೃತಿಕ ಪ್ರತಿಷ್ಠಾನ ಮೂಲಕ ಪ್ರತಿ ವರ್ಷ ಲೇಖಕಿಯರ ಕೃತಿಗಳಿಗೆ ಅವರು ಪ್ರಶಸ್ತಿ ನೀಡುತ್ತಿದ್ದರು.