* ಅರ್ಥಶಾಸ್ತ್ರದಲ್ಲಿ 2023 ರ ನೊಬೆಲ್ ಪ್ರಶಸ್ತಿಯನ್ನು ಅಮೇರಿಕಾದ ಆರ್ಥಿಕ ಇತಿಹಾಸಗಾರ್ತಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರಾಗಿರುವ 77 ವರ್ಷದ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.* ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ನೀಡಲಾಗಿದ್ದು, ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ಅಸಮಾನತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕ್ಲಾಡಿಯಾ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ ಈ  ಪ್ರಶಸ್ತಿ ಘೋಷಣೆ ಮಾಡಲಾಗಿದೆ.* ಕ್ಲಾಡಿಯಾ ಗೋಲ್ಡಿನ್ ಅವರು 'ಮಹಿಳಾ ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರ ಉತ್ಪಾದನೆಗಳ ಮಾರುಕಟ್ಟೆ' ಬಗೆಗೆ ಮಾಡಿರುವ ವ್ಯಾಪಕ ಸಂಶೋಧನೆ ಪರಿಗಣಿಸಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ.* ಮಹಿಳಾ ಕಾರ್ಮಿಕರು, ಗಳಿಗೆಯಲ್ಲಿ ಲಿಂಗ ತಾರತಮ್ಯ, ಆದಾಯ ಸಮಾನತೆ, ತಾಂತ್ರಿಕ ಬದಲಾವಣೆ, ಶಿಕ್ಷಣ, ವಲಸೆ ಸೇರಿದಂತೆ ಅನೇಕ ಆರ್ಥಿಕ ಸಂಗತಿಗಳ ಮೇಲೆ ಸಂಶೋಧನೆ ಮಾಡಿದ್ದಾರೆ.* 2009ರಲ್ಲಿ ಎಲಿನಾರ್ ಓಸ್ಟ್ರೋಮ್. 2019ರಲ್ಲಿ ಎಸ್ತರ್ ಡುಫ್ಲೋ. ಇದೀಗ ಈ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆ ಎಂಬ ಗೌರವಕ್ಕೆ ಕ್ಲಾಡಿಯಾ ಗೋಲ್ಡಿನ್‌ ಪಾತ್ರರಾಗಿದ್ದಾರೆ.* ಆರ್ಥಿಕ ವಿಜ್ಞಾನಕ್ಕೆ 1969 ರಿಂದ 2022 ರವರೆಗೆ ಒಟ್ಟು 54 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. 92 ಪುರಸ್ಕೃತರ ಪೈಕಿ 25 ಮಂದಿ ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು.* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ 2022 ರ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿ ವಿಜೇತರಾದ, ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್, ವಿಶೇಷವಾಗಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಗಮನಾರ್ಹವಾಗಿ ಸುಧಾರಿಸಿದ್ದಾರೆ. ("ಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆಗಾಗಿ") ಲಭಿಸಿದೆ.