* ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹಾಗು ಪರಿಹಾರ ಭತ್ಯೆಯನ್ನು ಶೇಕಡ 4 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಂಪುಟವು ಅಕ್ಟೋಬರ್ 18 ರಂದು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.* ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಜುಲೈನಿಂದ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಡಿಎ ಶೇಕಡ 42 ರಿಂದ ಶೇಕಡ 46 ಕ್ಕೆ ಹೆಚ್ಚಳವಾಗಿದೆ.* ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ- ಐಡಬ್ಲ್ಯೂ) ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.* 2022-2023 ಕ್ಕೆ, ಕೇಂದ್ರ ಸರ್ಕಾರಿ ನೌಕರರಿಗೆ ನಾನ್‌ ಪ್ರೊಡಕ್ಟಿವಿಟಿ ಬೋನಸ್‌ಗಳ (ಆಡ್ ಹಾಕ್ ಬೋನಸ್‌ಗಳು) ಲೆಕ್ಕಾಚಾರಕ್ಕಾಗಿ ಹಣಕಾಸು ಸಚಿವಾಲಯವು 7000 ರೂಪಾಯಿ ಮಿತಿಯನ್ನು ನಿಗದಿಪಡಿಸಿದೆ.* ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಿಂದ  47.58 ಲಕ್ಷ ಉದ್ಯೋಗಗಿಗಳು ಹಾಗೂ 69.76 ಲಕ್ಷ ಪಿಂಚಣಿದಾರರಿಗೆ ಈ ಸೌಲಭ್ಯವು ನೆರವಾಗಲಿದೆ. ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 12,815 ಖರ್ಚು ಮಾಡಲಿದೆ.* ಕೇಂದ್ರ ಸರ್ಕಾರಿ ನೌಕರರ ವೇತನವು ತಿಂಗಳ ವೇತನ 20,000 ರೂಪಾಯಿ ಆಗಿದ್ದರೆ, ತುಟ್ಟಿಭತ್ಯೆ ಶೇ. ಹೆಚ್ಚಳದಿಂದ ಪ್ರತಿ ತಿಂಗಳ ಸಂಬಳದಲ್ಲಿ 800 ರೂಪಾಯಿ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.