* ಅಧ್ಯಕ್ಷ ಷಿ ಜಿನ್ ಪಿಂಗ್ ಅವರು 'ಪಾಶ್ಚಾತ್ಯ ರಾಷ್ಟ್ರಗಳು ಬೆಲ್ಟ್ ಆಂಡ್ ರೋಡ್ ಉಪಕ್ರಮವನ್ನು (ಬಿಆರ್‌ಐ) ದುರ್ಬಲ ಗೊಳಿಸಲು ಯತ್ನಿಸುತ್ತಿವೆ. ಆ ಮೂಲಕ ಚೀನಾ ಆರ್ಥಿಕತೆ ಮೇಲೆ ಪಾಲುದಾರ ರಾಷ್ಟ್ರಗಳು ಹೊಂದಿರುವ ಅವಲಂಬನೆ ತಗ್ಗಿಸಲು ಹುನ್ನಾರ ನಡೆಸಿವೆ' ಎಂದು  ವಿರೋಧ ವ್ಯಕ್ತಪಡಿಸಿದ್ದಾರೆ.* ಬಿಆರ್‌ಐ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಷಿ ಜಿನ್ ಪಿಂಗ್ ಅವರು, 'ದಶಕದ ಹಿಂದೆಯೇ ಈ ಯೋಜನೆಯನ್ನು ರೂಪಿಸಲಾಗಿತ್ತು ಎಂದು 18 ಅಕ್ಟೋಬರ್ 2023 ರಂದು ತಿಳಿಸಿದರು. ಏಷ್ಯಾ, ಆಫ್ರಿಕಾ ಹಾಗೂ ಯುರೋಪ್ ಈ ಮೂರೂ ರಾಷ್ಟ್ರಗಳ ನಡುವೆ ನೆಲ, ಜಲ ಮಾರ್ಗವಾಗಿ ಜಾಗತಿಕ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇಂಧನ ಸಂಪರ್ಕ ಬೆಸೆಯುವುದು ಇದರ ಮೂಲ ಉದ್ದೇಶವಾಗಿದೆ . * ಬಿಆರ್‌ಐ ಒಳಪಟ್ಟ ಎಲ್ಲಾ ರಾಷ್ಟ್ರಗಳ ಪರಸ್ಪರ ಅರ್ಥಿಕ ನೆರವು ನೀಡಿ ಎಲ್ಲ ರಾಷ್ಟ್ರಗಳ ನಡುವೆ ಇರುವ ಸಂಬಂಧವನ್ನು ಮುರಿದ ಹಾಗೆ ಆಗುತ್ತದೆ ಇದರಿಂದ `ರಾಷ್ಟ್ರಗಳು ಸಂಕಷ್ಟದ ಕುಣಿಕೆಗೆ ಸಿಲುಕಲಿವೆ. ಹೀಗೆ ಚೀನಾ ಮೇಲಿನ ಅವಲಂಬನೆ ತಗ್ಗಿಸಲು ಮುಂದಾಗಿರುವ ಯುರೋಪ್ ರಾಷ್ಟ್ರಗಳ ನಡೆ ಸರಿಯಲ್ಲ.* ಟಿಯಾನನ್‌ಮೆನ್‌ ಚೌಕದ ಸಭಾಂಗಣದಲ್ಲಿ ಸಭೆ ನಡೆಯುತ್ತಿದೆ. ಜಾಗತಿಕ ದಕ್ಷಿಣ ಭಾಗಕ್ಕೆ ಸೇರಿದ ದೇಶಗಳು ಸೇರಿದಂತೆ 130ಕ್ಕೂ ಹೆಚ್ಚು ರಾಷ್ಟ್ರಗಳ ಒಂದು ಸಾವಿರ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು . ರಷ್ಯಾ ಅಧ್ಯಕ್ಷ  ಪುಟಿನ್ ಕೂಡ ಭಾಗವಹಿಸಿದ್ದರು .