* ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಿಂದ ಭಾರತದ ಆರ್ಥಿಕ ಪರಿಸ್ಥಿತಿ ಕುರಿತಂತೆ 2023ರ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ಪ್ರಕಟ ವರದಿಯೊಂದನ್ನು ಸಿದ್ಧಪಡಿಸಿದೆ. * “ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2023” ರ ವರದಿಯು 2018ರಿಂದ 2020ರ ವರೆಗೆ ಆರ್ಥಿಕತೆಯ ನಿಧಾನಗತಿ ಮತ್ತು ನಂತರ, ಕಾರ್ಮಿಕ ಮಾರುಕಟ್ಟೆ ಮೇಲೆ ಕೊರೊನಾ ಸಾಂಕ್ರಾಮಿಕತೆಯ ಪರಿಣಾಮ ಕುರಿತು ಗಮನ ಹರಿಸಿದೆ. * ಈ ಅವಧಿಯಲ್ಲಿ ಹೆಚ್ಚಾಗಿ ಸ್ವಯಂ-ಉದ್ಯೋಗಕ್ಕೆ ಹೆಚ್ಚಿನ ಸ್ಥಿತ್ಯಂತರವಾಗಿದ್ದು ಮಹಿಳೆಯರ ಉದ್ಯೋಗಾವಕಾಶದ ಮೇಲೆ ಅಧಿಕ ದುಷ್ಪರಿಣಾಮ ಬೀರಿದೆ ಎಂದು ವರದಿ ಬಹಿರಂಗಪಡಿಸಿದೆ. * ನಿಯಮಿತ ವೇತನದ ಕೆಲಸಗಾರರ ಸಂಖ್ಯೆ ವಿಸ್ತರಣೆಗೊಂಡಿದೆ. ಆದರೆ ಮಹಿಳೆಯರು ವಿವಿಧ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಬಹುತೇಕ ಮಹಿಳೆಯರು ಕೆಲಪದ ಕ್ಷೇತ್ರದಿಂದ ಹೊರಗೆ ಉಳಿದಿದ್ದಾರೆ.