* ದೇಶದಾದ್ಯಂತದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ 'ಒಂದು ದೇಶ ಒಂದು ಐಡಿ' ಎಂಬ ನೀತಿಯನ್ನು ಜಾರಿಗೊಳಿಸಲು ಭಾರತ ಸರ್ಕಾರ ಯೋಜನೆಯನ್ನು ರೂಪಿಸಿದೆ.* ಕೇಂದ್ರ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಸ್ವಯಂಚಾಲಿತ ಖಾಯಂ ಶೈಕ್ಷಣಿಕ ಖಾತೆ ನೋಂದಣಿ ಅಥವಾ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ('APAAR') ಅನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ರಾಜ್ಯಗಳಿಗೆ ಸೂಚನೆ ನೀಡಿದೆ. * 2020 ರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಭಾಗವಾಗಿ 'ಒಂದು ದೇಶ, ಒಂದು ವಿದ್ಯಾರ್ಥಿ ಐಡಿ' ರೂಪಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಯೋಜನೆಯನ್ನು ರೂಪಿಸುತ್ತದೆ.* ದೇಶದ ಎಲ್ಲ ಪ್ರಜೆಗಳಿಗೆ ವಿಶಿಷ್ಟ ಗುರುತು ಸಂಖ್ಯೆ 'ಆಧಾರ್' ಕಾರ್ಡ್ ಇದ್ದು, ಅದೇ ರೀತಿ ಎಲ್ಲ ದೇಶದ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತು ಸಂಖ್ಯೆ ಒದಗಿಸಲು ಸರ್ಕಾರ ಯೋಜಿಸುತ್ತದೆ.