* ಕೇಂದ್ರ ಕ್ಯಾಬಿನೆಟ್ (ಕೇಂದ್ರ ಸಚಿವ ಸಂಪುಟದಿಂದ) ಪರಿಸರ ಸ್ನೇಹಿ ಬಸ್ ಗಳ ಸಂಚಾರ ಪ್ರತ್ಸಾಹಿಸುವ 'PM-eBus ಸೇವಾ' ಯೋಜನೆಗೆ ಆಗಸ್ಟ್ 16 ರಂದು ಅನುಮೋದನೆ ನೀಡಿದೆ. * ಭಾರತದಲ್ಲಿ ಒಟ್ಟು 169 ನಗರಗಳಿದ್ದು ಅದರಲ್ಲಿ100 ನಗರಗಳನ್ನು ಶಾರ್ಟ್‌ಲಿಸ್ಟ್ ಮಾಡುವಮೂಲಕ   ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ದೇಶಾದ್ಯಂತ 10000 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಿಳಿಸಿದರು.* PM-eBus ಸೇವಾ ಯೋಜನೆಗೆ 57,613 ಕೋಟಿ ರೂ ಗಳಲ್ಲಿ 20,000 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ನೀಡಲಿದೆ, ಮತ್ತು ಈ ಯೋಜನೆಯು ಸಂಪರ್ಕವನ್ನು ಸುಧಾರಿಸಲು ಹಾಗೂ ಹಸಿರು ಚಲನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂಬುವುದಾಗಿ ಸಚಿವರು ಮಾಹಿತಿ ನೀಡಿದರು.* PM-eBus ಸೇವಾ  ಯೋಜನೆಯು 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ಒಳಗೊಂಡಿದ್ದು, ಈಶಾನ್ಯ ಪ್ರದೇಶದ ಎಲ್ಲಾ ರಾಜಧಾನಿ ನಗರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಗುಡ್ಡಗಾಡು ರಾಜ್ಯಗಳನ್ನು ಸೇರಿಸಲಾಗುವುದು. ಮತ್ತು ಪ್ರಯಾಣಿಕರಿಗೆ ರಾಷ್ಟ್ರೀಯ ಹಸಿರು ಚಲನಶೀಲ ಕಾರ್ಡ್‌ಗಳನ್ನು ಒದಗಿಸಲಾಗುವುದು.* ಈ ಯೋಜನೆಯಡಿಯಲ್ಲಿ45,000 ರಿಂದ 55,000 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.