* ಭಾರತದಲ್ಲಿ ಹಲವಾರು ಪ್ರದೇಶಗಳಲ್ಲಿ ಪ್ರವಾಹಗಳು ಹೆಚ್ಚಿತ್ತಿರುವದರಿಂದ ಕೇಂದ್ರ ಸರ್ಕಾರವು ಆಗಸ್ಟ್ 17 ರಂದು 'ಫ್ಲಡ್ ವಾಚ್' ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದು, ಈ ಆ್ಯಪ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ತಕ್ಷಣದ ಮಾಹಿತಿ ತಲುಪಿಸುತ್ತದೆ.* ಕೇಂದ್ರ ಜಲ ಆಯೋಗದ (CWC) ಅಧ್ಯಕ್ಷ ಕುಶ್ವಿಂದರ್ ವೋಹ್ರಾ ರವರು ಈ 'ಫ್ಲಡ್ ವಾಚ್' ಅಪ್ಲಿಕೇಶನವು  23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೈಜ-ಸಮಯದ ಪ್ರವಾಹ ನವೀಕರಣಗಳನ್ನು ಕಳುಹಿಸಲು ಒಟ್ಟು 338 ನಿಲ್ದಾಣಗಳಿಂದ ಡೇಟಾವನ್ನು ಸಂಗ್ರಹಿಸುತ್ತದೆ ಎಂಬುವುದಾಗಿ ಹೇಳಿದ್ದಾರೆ.* 'ಫ್ಲಡ್ ವಾಚ್' ಆ್ಯಪ್ ಇದು ನಿಖರವಾದ, ಸಮಯೋಚಿತ ಪ್ರವಾಹ ಮುನ್ಸೂಚನೆಗಳನ್ನು ತಿಳಿಸುವದಕ್ಕಾಗಿ ಉಪಗ್ರಹ ಕಳುಹಿಸುವ ದತ್ತಾಂಶ ವಿಶ್ಲೇಷಣೆ, ಗಣಿತ ಮಾದರಿ ಮತ್ತು ವಿವಿಧ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತದೆ. * ಈ ಆ್ಯಪ್ ಮೊಬೈಲ್ ಫೋನ್‌ಗಳನ್ನು ಬಳಸುವ ಉದ್ದೇಶ ಹೊಂದಿದ್ದು, 7 ದಿನದ ಮುನ್ಸೂಚನೆ ನೀಡುತ್ತದೆ. 'ಫ್ಲಡ್ ವಾಚ್' ಲಿಖಿತ ಮತ್ತು ಆಡಿಯೊ ರೂಪಗಳಲ್ಲಿ ಎಚ್ಚರಿಕೆ ಸಂದೇಶಗಳನ್ನು  ಮತ್ತು ಪ್ರವಾಹ ಮುನ್ಸೂಚನೆಗಳನ್ನು ಕಳುಹಿಸುತ್ತದೆ ಎಂದು CWC ಮುಖ್ಯಸ್ಥರು ತಿಳಿಸಿದ್ದಾರೆ.