* ಭಾರತ - ಕಝಕಿಸ್ತಾನ್ ಉಭಯ ದೇಶಗಳ ಜಂಟಿ ಮಿಲಿಟರಿ ಅಭ್ಯಾಸ 8ನೇ ಆವೃತ್ತಿ (KAZIND ಉತ್ತರಾಖಂಡದ -2024) ಔಲಿಯಲ್ಲಿ ಸೆ.30ರಿಂದ ಪ್ರಾರಂಭವಾಗಿದ್ದು, ಅ.13ರವರೆಗೆ ನಡೆಯಲಿದೆ.* ಭಾರತದ ಕುಮಾನ್ ರೆಜಿಮೆಂಟ್‌ನ 120 ಸಿಬ್ಬಂದಿ ಮತ್ತು ಕಝಕಿಸ್ತಾನ್ ತಮ್ಮ ಲ್ಯಾಂಡ್‌ಫೋರ್ಸ್ ಮತ್ತು ವಿರ್‌ಬೋರ್ನ್ ಅಸಾಲ್ಟ್ ಗ್ರೂಪರ್‌ನ ಪಡೆ ಈ ತರಬೇತಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.* ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಯನ್ನು ಸುಧಾರಿಸುವುದು, ಪರಸ್ಪರ ಸುಧಾರಿತ ಯುದ್ಧ ತಂತ್ರಗಳನ್ನು ಕಲಿಯುವುದು, ಸೈನಿಕರ ದೈಹಿಕ ಸಾಮರ್ಥ್ಯ ಸಾಧನೆಯನ್ನು ಕಲಿಯುವುದು, ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಈ ಅಭ್ಯಾಸದ ಪ್ರಮುಖ ಗುರಿಯಾಗಿದೆ.* ಎರಡೂ ರಾಷ್ಟ್ರಗಳ ಸಶಸ್ತ್ರ ಪಡೆಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿ ಮಾಡುವುದು, ಮಿಲಿಟರಿ ತರಬೇತಿ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವುದು ಮತ್ತು ಪ್ರಗತಿ ಸಾಧಿಸುವ ಉದ್ದೇಶದಿಂದ ಉಭಯ ರಾಷ್ಟ್ರಗಳು 2016ರಲ್ಲಿ ಈ ತರಬೇತಿ ಅಭ್ಯಾಸವನ್ನು ಪ್ರಾರಂಭಿಸಿದವು.* ಪ್ರತಿ ವರ್ಷ ಈ ಅಭ್ಯಾಸ ನಡೆಯುತ್ತದೆ. ಕಳೆದ ವರ್ಷ ಈ ಸಮರಾಭ್ಯಾಸ ಕಝಕಿಸ್ತಾನದಲ್ಲಿ ನವೆಂಬರ್ 11ರವರೆಗೆ ನಡೆದಿತ್ತು.