* ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಅಸಿಮ್ ಮಲಿಕ್ ಅವರನ್ನು ಪಾಕಿಸ್ತಾನದ ಪ್ರಾಥಮಿಕ ಗುಪ್ತಚರ ಸಂಸ್ಥೆ(ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್-ಐಎಸ್‌ಐ)ನ ಹೊಸ ಡೈರೆಕ್ಟರ್ ಜನರಲ್ (ಡಿಜಿ)ಆಗಿ ನೇಮಿಸಲಾಗಿದೆ.* ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರಿಂದ ತೆರವಾದ ಸ್ಥಾನವನ್ನು ಮಲಿಕ್ ತುಂಬಲಿದ್ದಾರೆ.* ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭದ್ರತಾ ಅಪಾಯಗಳು, ರಾಜಕೀಯ ಅಶಾಂತಿ ನಡುವೆ ಅಲ್ಲಿನ ಸರಕಾರ ಈ ಬದಲಾವಣೆ ಮಾಡಿದೆ.* 59 ವರ್ಷದ ಮಲಿಕ್ ಅವರು ಬಲೂಚಿಸ್ತಾನದ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡಿದ್ದು, ಅಮೆರಿಕ ಮತ್ತು ಇಂಗ್ಲೆಂಡ್‌ನ ಪ್ರಸಿದ್ದ ರಕ್ಷಣಾ ಸಂಸ್ಥೆಗಳಲ್ಲಿ ಮಿಲಿಟರಿ ಶಿಕ್ಷಣ ಪಡೆದಿದ್ದಾರೆ. ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯಲ್ಲಿ ಮಿಲಿಟರಿ ತರಬೇತಿ ಪಡೆಯುವ ಸಮಯದಲ್ಲಿ ಪ್ರತಿಷ್ಠಿತ 'ಸ್ಪೋರ್ಡ್ ಆಫ್ ಆನರ್' ಎಂಬ ಅತ್ಯುನ್ನತ ಗೌರವವನ್ನೂ ಪಡೆದಿದ್ದಾರೆ.* ಬಲೂಚಿಸ್ತಾನದ ಕಾಲಾಳುಪಡೆ ವಿಭಾಗದ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಅನೇಕ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದಾರೆ. ಮತ್ತು ಪಾಕಿಸ್ತಾನದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ಮುಖ್ಯ ಬೋಧಕರಾಗಿದ್ದರು.* ಮಿಲಿಟರಿ ಪಡೆಯಿಂದ ಆಯ್ಕೆಯಾಗುವ ಐಎಸ್‌ಐ ಮುಖ್ಯಸ್ಥರ ನೇಮಕಕ್ಕೆ ಪಾಕ್ ಪ್ರಧಾನಿ ಅನುಮೋದನೆ ನೀಡಲಿದ್ದಾರೆ.* ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಂದ 2021 ರಲ್ಲಿ ಡಿಜಿ ಐಎಸ್‌ಐ ಆಗಿ ನೇಮಕಗೊಂಡ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರ ಉತ್ತರಾಧಿಕಾರಿಯಾಗಿ ಜನರಲ್ ಮಲಿಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.