* ನೀರಜ್ ಚೋಪ್ರಾ 2023 ಆಗಸ್ಟ್ 31 ರಂದು ನಡೆದ ಜೂರಿಚ್ ಡೈಮಂಡ್ ಲೀಗ್ ನಲ್ಲಿ 85.71 ಮೀ. ದೂರಕ್ಕೆ ಭರ್ಚಿ ಎಸೆದು 2ನೇ ಸ್ಥಾನ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಪ್‌ನಲ್ಲಿ ಕಂಚಿನ ಪದಕ ಗೆದಿದ್ದ ಜಾಕೊಬ್ ವಾಡ್ಲಿಚ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಜರ್ಮನಿಯ ಜುಲೆನ್ ವೆಬೆರ್ (85.04) 3ನೇ ಸ್ಥಾನ ಪಡೆದುಕೊಂಡಿದ್ದಾರೆ.*  ನೀರಜ್ ಚೋಪ್ರಾ ಅವರು ತಮ್ಮ ಮೊದಲ ಎಸೆತದಲ್ಲಿ 80.79 ಮೀಟರ್ ದೂರ ಭರ್ಚಿ ಎಸೆದರೆ, 4ನೇ ಪ್ರಯತ್ನದಲ್ಲಿ 85.22 ಮೀಟರ್, 6ನೇ ಪ್ರಯತ್ನದಲ್ಲಿ 85.71 ಮೀಟರ್ ದೂರ ಎಸೆದು ಜಾಕೊಬ್ ವಾಡ್ಲಿಚ್ (85.86) ಗೆ ಪ್ರಬಲ ಪೈಪೋಟಿ ನೀಡಿದರೂ, ಕೆಲವೇ ಅಂತರದಿಂದ ಮೊದಲ ಸ್ಥಾನ ಪಡೆಯುವಲ್ಲಿ ಎಡವಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು.* ಚೋಪ್ರಾ ಅವರು ಈ ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ 4.96 ಲಕ್ಷ ಬಹುಮಾನ ಪಡೆದರು. ಪ್ರಥಮ ಸ್ಥಾನ ಪಡೆದ ಜಾಕೊಬ್ ವಡ್ಲೆಚ್ ಅವರು 9.92 ಲಕ್ಷ ಬಹುಮಾನವನ್ನು ಪಡೆದುಕೊಂಡಿದ್ದಾರೆ.   *  ಇತ್ತೀಚೆಗಷ್ಟೇ ಹಂಗರಿಯ ಬುದಾಫೆಸ್ಟ್ ನಲ್ಲಿ ಮುಕ್ತಾಯಗೊಂಡಿದ್ದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಭಾರತದ ಆಟಗಾರ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಅವರು ಸೆಪ್ಟೆಂಬರ್ 17 ರಂದು ಯುಜೀನ್ ಡೈಮಂಡ್ ಲೀಗ್ ಫೈನಲ್‌ಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ, ನಂತರ ಸೆಪ್ಟೆಂಬರ್ 23 ರಂದು ಪ್ರಾರಂಭವಾಗುವ (ಹ್ಯಾಂಗ್‌ಝೌ) ಏಷ್ಯನ್ ಗೇಮ್ಸ್‌ನಲ್ಲಿ ಗಮನಹರಿಸಬೇಕು ಎಂದು ಹೇಳಿದ್ದಾರೆ.