* ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) ಶಾರ್‌ನಿಂದ PSLV-C57/ಆದಿತ್ಯ-L1 ಮಿಷನ್ ಯಶಸ್ವಿ ಯಾಗಿ ಉಡಾವಣೆ.* ಆದಿತ್ಯ-L1 ಬಾಹ್ಯಾಕಾಶ ನೌಕೆಯು ಸೌರ ಕರೋನದ ದೂರಸ್ಥ ವೀಕ್ಷಣೆಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸರಿ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ L1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ನಲ್ಲಿ ಸೌರ ಮಾರುತದ ಸಿತ ವೀಕ್ಷಣೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.* ಬೆಂಗಳೂರಿನ ಪ್ರಧಾನ ಕಛೇರಿಯ ಬಾಹ್ಯಾಕಾಶ ಸಂಸ್ಥೆಯಿಂದ 11:50 ಗಂಟೆಗೆ ಉಡಾವಣೆ ಗೊಂಡಿರುವ ಸೂರ್ಯನ ವೀಕ್ಷಣೆಗಾಗಿ ಇದು ಮೊದಲ ಮೀಸಲಾದ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ.* ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯಲ್ಲಿ ಒಟ್ಟು ಏಳು ಉಪಕರಣಗಳಿದ್ದು, ನಾಲ್ಕು ಉಪಕರಣಗಳು ಸೂರ್ಯನನ್ನು ದಳಿ ವೀಕ್ಷಣೆ ಮಾಡಿದರೆ ಉಳಿದ ಮೂರು ಉಪಕರಣಗಳು ಕಣಗಳು, ಪ್ಲಾಸ್ಮಾ, ಕಾಂತ ಕ್ಷೇತ್ರಗಳ ಅಧ್ಯಯನ ಮಾಡುತ್ತವೆ.